‘James’ ಪ್ರೀ ರಿಲೀಸ್ ಈವೆಂಟ್ ನಡೆಯೋದ್ಯಾವಾಗ..?? ಎಲ್ಲಿ ಗೊತ್ತಾ..??
ಕರ್ನಾಟಕದಲ್ಲಿ ಅಪ್ಪು ಅಭಿಮಾನಿಗಳು ಮಾರ್ಚ್ 17 ರಿಂದ ಜಾತ್ರೆ ಶುರುಮಾಡಲಿದ್ದಾರೆ. ಅಪ್ಪು ಹುಟ್ಟುಹಬ್ಬ ಒಂದೆಡೆಯಾದ್ರೆ , ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಲಿದೆ. ವಿಶ್ವಾದ್ಯಂತ 15 ಕ್ಕೂ ಹೆಚ್ಚು ದೇಶಗಳಲ್ಲಿ Puneeth Rajkumar ಅವರ James ಸಿನಿಮಾ ರಿಲೀಸ್ ಆಗ್ತಿದೆ.. ಅಂದ್ಹಾಗೆ ಈ ಸಿನಿಮಾ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿಯಲ್ಲಿ ರಿಲೀಸ್ ಆಗಲಿದೆ.. ಅದ್ಧೂರಿಯಾಗಿಯೇ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ..
ಅಂದ್ಹಾಗೆ ಇದೀಗ ಪ್ರೀ ರಿಲೀಸ್ ಈವೆಂಟ್ ಬಗ್ಗೆಯೆಯೇ ಚರ್ಚೆ ನಡೆಯುತ್ತಿದೆ. ಈ ನಡುವೆ ಸ್ಥಳ ದಿನಾಂಕ ಫಿಕ್ಸ್ ಆಗಿದೆ. ಮಾ.13ರಂದು ಅದ್ಧೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಬಹುತೇಕ ಚಿತ್ರರಂಗವೇ ಇದರಲ್ಲಿ ಭಾಗಿಯಾಗಲಿದೆ. ಮೊದಲ ಬಾರಿಗೆ ಬಹುತೇಕ ಕಲಾವಿದರು ಒಂದಾಗಿ ಸೇರುತ್ತಿರುವ ಕಾರ್ಯಕ್ರಮ ಎನ್ನುವ ಹೆಗ್ಗಳಿಕೆಗೂ ಇದು ಪಾತ್ರವಾಗಲಿದೆ. ಸಿನಿಮಾ ವಿಶ್ವದ 15 ಕ್ಕೂ ಹೆಚ್ಚು ದೇಶಗಳಲ್ಲಿ 4000 ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ.