ಬ್ರಿಟನ್ ನಲ್ಲಿ ರಾಧೆ ಶ್ಯಾಮ್ ಸಿನಿಮಾದ ಒಂದು ಮಿಲಿಯನ್ ಟಿಕೆಟ್ ಸೇಲ್
ಬೆಂಗಳೂರು : ಮಾರ್ಚ್ 11 ಅಂದ್ರೆ ನಾಳೆ ಬಾಹುಬಲಿ ಖ್ಯಾತಿಯ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ್ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ.. ಬಾಕ್ಸ್ ಆಪೀಸ್ ನಲ್ಲಿ ರೆಕಾರ್ಡ್ ಮಾಡಲು ಸಜ್ಜಾಗ್ತಿದೆ. ಸಿನಿಮಾ ರಿಲೀಸ್ ಗೆ ಉಳಿದಿರುವುದು ಇನ್ನೊಂದೇ ದಿನ… ಅಭಿಮಾನಿಗಳ ಕಾತರತೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಲೇ ಇದೆ.. ಬಾಹುಬಲಿ , ಸಾಹೋ ಅಂತಹ ಮಾಸ್ ಸಿನಿಮಾಗಳ ನಂತರ ಪ್ರಭಾಸ್ ಕಂಪ್ಲೀಟ್ ಲವರ್ ಬಾಯ್ ಆಗಿ ಕಾಣಿಸಿಕೊಳ್ತಿರುವ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ವಿಸೇಷ ಒಲವಿದೆ..
ನಾಳೆ ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಥಿಯೇಟರ್ ಮುಂದೆ ಬೆಳ್ಳಂ ಬೆಳಿಗ್ಗೆ ಮುಗಿಬೀಳುತ್ತಾರೆ.. ವಿಶ್ವಾದ್ಯಂತ ರಾಧೆ ಶ್ಯಾಮ್ ಸಾಹೋ , ಪುಷ್ಪ , ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡುವ ನಿರೀಕ್ಷೆಯಿದೆ.. ಈ ನಡುವೆ ಬ್ರಿಟನ್ ನಲ್ಲಿ ಫಸ್ಟ್ ಡೇ ಫಸ್ಟ್ ಶೋಗೆ ಬೇಡಿಕೆ ಹೆಚ್ಚಾಗಿದೆ.. ಮೂಲಗಳ ಪ್ರಕಾರ ಕೆಲ ದಿನಗಳಿಂದ ಸಿನಿಮಾದ ಪ್ರೀ ಬುಕಿಂಗ್ ಗೆ ಅವಕಾಶ ನೀಡಲಾಗಿದ್ದು , ಮಾರ್ಚ್ 9 ರ ವೇಳೆಗೆ ಸುಮಾರು 1 ಮಿಲಿಯನ್ ಟಿಕೆಕ್ ಸೋಲ್ಡ್ ಔಟ್ ಆಗಿದೆ ಎನ್ನಲಾಗ್ತಿದೆ..
ಅಲ್ಲದೇ ಭಾರತೀಯ ಸಿನಿಮಾದ ಹೊಸ ದಾಖಲೆಯಿದು ಎನ್ನಲಾಗ್ತಿದೆ. ಇನ್ನೂ ಟಿಕೆಟ್ ಬುಕಿಂಗ್ ಸಂಖ್ಯೆ ಹೆಎಚ್ಚಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಈ ಸಿನಿಮಾ ವಿಶ್ವದಾದ್ಯಂತೆ ಸುಮಾರು 10 ಸಾವಿರ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗುತ್ತಿದೆ ಎನ್ನಲಾಗ್ತಿದೆ.