Prabhas : ‘ರಾಧೆ ಶ್ಯಾಮ್’ ಒಪ್ಪಿ ರಿಸ್ಕ್ ತೆಗೆದುಕೊಂಡೆ ಎಂದಿದ್ಯಾಕೆ..??
ಪ್ರಭಾಸ್ ಅವರು ರಾಧೆಶ್ಯಾಮ್ ಒಪ್ಪಿ ರಿಸ್ಕ್ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ಒಂದೇ ಒಂದು ಫೈಟ್ ಸೀನ್ ಗಳು ಇಲ್ಲ ಎನ್ನಲಾಗ್ತಿದೆ.. ಆದ್ರೆ ಡಾರ್ಲಿಂಗ್ ಬಾಹುಬಲಿ ನಂತರ ಭಾರತದ ಮಾಸ್ ಹೀರೋ ಆಗಿದ್ದಾರೆ. ಅವರು ಒಂದು ಮಾಸ್ ಇಮೇಜ್ ಕ್ರಿಯೇಟ್ ಮಾಡಿದ್ಧಾರೆ.. ಆದ್ರೆ ಕಂಪ್ಲೀಟ್ ಲವರ್ ಬಾಯ್ ಆಗಿ ಅವರ ಅಭಿಮಾನಿಗಳು ಸ್ವೀಕರಿಸುತ್ತಾರಾ , ಒಪ್ಪುತ್ತಾರಾ ,,, ಇಷ್ಟ ಪಡ್ತಾರಾ,,, ಅನ್ನೋದು ಸದ್ಯದ ಪ್ರಶ್ನೆಯಾಗಿದೆ.
ಪ್ರಭಾಸ್ ರಾಧೆ ಶ್ಯಾಮ್ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಚಾರ ಕಾರ್ಯಕ್ರಮವೊಂದರಲ್ಲೇ ಮಾತನಾಡಿರುವ ಪ್ರಭಾಸ್ ‘ರಾಧೆ ಶ್ಯಾಮ್’ ಸಿನಿಮಾ ಒಪ್ಪಿಕೊಂಡಿದ್ದೇ ದೊಡ್ಡ ರಿಸ್ಕ್ ಎಂದು ಹೇಳಿಕೊಂಡಿದ್ದಾರೆ. ನಾನು ಟಾಲಿವುಡ್ನಲ್ಲಿ ಲವ್ ಸ್ಟೋರಿ ಸಿನಿಮಾಗಳಲ್ಲಿ ನಟಿಸಿ ಸಾಬೀತು ಮಾಡಿದ್ದೇನೆ. ನಾನು ನಟಿಸಿದ ವರ್ಷಂ, ಡಾರ್ಲಿಂಗ್ ಹಾಗೂ ಮಿಸ್ಟರ್ ಪರ್ಫೆಕ್ಟ್ ಅಂತಹ ಲವ್ ಸ್ಟೋರಿ ಸಿನಿಮಾಗಳು ಹಿಟ್ ಆಗಿವೆ.. ಇದನ್ನೇ ಬಾಲಿವುಡ್ನಲ್ಲಿ ಮಾಡಲು ಹೊರಟಿದ್ದೇನೆ. ‘ರಾಧೆ ಶ್ಯಾಮ್’ ಅಂತಹ ಒಂದು ಪ್ರಯತ್ನದಲ್ಲಿ ಒಂದು. ಈ ಕಾರಣಕ್ಕೆ ‘ರಾಧೆ ಶ್ಯಾಮ್’ ನಾನು ತೆಗೆದುಕೊಂಡ ದೊಡ್ಡ ರಿಸ್ಕ್ ಎಂದು ಹೇಳಿದ್ದಾರೆ.
ಅಂದ್ಹಾಗೆ ಪ್ಯಾನ್ ಇಂಡಿಯಾ ಸಿನಿಮಾವಾದ ರಾಧೆ ಶ್ಯಾಮ್ ಸಿನಿಮಾ ತೆಲುಗು ಹಿಂದಿ ಭಾಷೆಗಳಲ್ಲಿ ಪ್ರತ್ಯೇಕವಾಗಿ ಶೂಟ್ ಆಗಿದೆ.. ಎರೆಡೂ ಭಾಷೆಗಳಲ್ಲೂ ಪೂಜಾ , ಪ್ರಭಾಸ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.. ಈ ಬಿಗ್ ಬಜೆಟ್ ಸಿನಿಮಾ ರಿಲೀಸ್ ಆಗುತ್ತಿದೆ. ಗಳಲ್ಲಿ ನಟಿಸಿ ಗೆದ್ದಿದ್ದೇನೆ. ” ಪ್ರಭಾಸ್ ಪ್ರಚಾರದ ವೇಳೆ ಹೇಳಿದ್ದಾರೆ.
ಹಾಗಂತ ಸಿನಿಮಾದಲ್ಲಿ ಆಕ್ಷನ್ ಥ್ರಿಲ್ಲಿಂಗ್ ಸೀನ್ಸೇ ಇಲ್ಲ ಅನ್ನೋ ಹಾಗೇನಿಲ್ಲ.. ಈ ಸಿನಿಮಾದಲ್ಲಿ ಥ್ರಿಲ್ಲರ್ ಎಲಿಮೆಂಟ್ಸ್ ಇದೆ. ಚೇಸಿಂಗ್ ದೃಶ್ಯವಿದೆ. ಅಲ್ಲದೇ ಪ್ರಭಾಸ್ ಅವರೇ ಹೇಳಿರೋ ಹಾಗೆ ಹಡಗಿನ ದೃಶ್ಯವೇ 13 ನಿಮಿಷಗಳಿರಲಿದೆಯಂತೆ. ಆದ್ರೆ ಆಕ್ಷನ್ ಪ್ರಿಯರಿಗೆ ಈ ಸಿನಿಮಾದಿಂದ ನಿರಾಸೆಯಾಗುವುದಿಲ್ಲ.. ನನ್ನ ವಿಕ್ರಮಾದಿತ್ಯನ ಪಾತ್ರವೂ ನನ್ನ ಫಿಮೇಲ್ ಫ್ಯಾನ್ಸ್ ಇಷ್ಟವಾಗಲಿದೆ ಎಂದಿದ್ಧಾರೆ.. ಮಾರ್ಚ್ 11 ಅಂದ್ರೆ ನಾಳೆ ರಾಧೆ ಶ್ಯಾಮ್ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ..