ತೆಲುಗು , ಹಿಂದಿ ಸಿನಿಮಾರಂಗದಲ್ಲಿ ಪ್ರಸ್ತುತ ಬ್ಯುಸಿಯಾಗಿರುವ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಈಗ ಕಾಂಡೊಮ್ ಕುರಿತ ಕತೆಯಾಧಾರಿತ ಸಿನಿಮಾವಾದ ಛತ್ರಿವಾಲಿ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ಸಿನಿಮಾದಲ್ಲಿ ರಾಕುಲ್ ಕಾಂಡೊಮ್ ಅನ್ನು ಪರೀಕ್ಷಿಸುವ ಪರೀಕ್ಷಕಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಒಂದೆಡೆ ಕಾಂಡೋಮ್ ಬಗ್ಗೆ ಮಾತನಾಡಲು ಪುರುಷರಿಗೂ ಕೊಂಚ ಇರಿಸು ಮುರಿಸಾಗುತ್ತದೆ. ಅಂತಹದ್ರಲ್ಲಿ ರಕುಲ್ ಕಾಂಡೊಮ್ ಪರೀಕ್ಷಕಿಯ ಪಾತ್ರವನ್ನು ಒಪ್ಪಿಕೊಂಡು ಬೋಲ್ಡ್ ನಿರ್ಧಾರ ಮಾಡಿದ್ಧಾರೆ.. ಇನ್ನೂ ಈ ಸಸಿನಿಮಾ ಲೈಂಗಿಕತೆ ಕುರಿತಾದ ಕತೆಯಾದ್ರೂ ಕೌಟುಂಬಿಕ ಸಿನಿಮಾ ಎಂದು ರಕುಲ್ ಪ್ರೀತ್ ಅಭಿಪ್ರಾಯ ಪಟ್ಟಿದ್ದಾರೆ.
ಹೌದು.. ಈ ರೀತಿಯ ವಿಷಯಗಳ ಬಗ್ಗೆ ಮುಜುಗರ, ನಿಷೇಧ ಸರಿಯಲ್ಲ. ಛತ್ರಿವಾಲಿ ಸಿನಿಮಾ ಗಂಭೀರ ಸಂದೇಶವನ್ನು ಹೊಂದಿದ್ದರೂ ತೀರ ಗಂಭೀರ ಸಿನಿಮಾವಲ್ಲ. ಗಂಭೀರ ವಿಷಯವನ್ನು, ಲೈಂಗಿಕ ಶಿಕ್ಷಣದ ಬಗೆಗಿನ ಸಮಾಜದ ತಿಳುವಳಿಕೆಯನ್ನು ಲಘು ಧಾಟಿಯಲ್ಲಿ ಹೇಳಲಿದೆ ಎಂದಿದ್ದಾರೆ ರಕುಲ್ ಅಭಿಪ್ರಾಯ ಪಟ್ಟಿರೋದಾಗಿ ತಿಳಿದುಬಂದಿದೆ. ರಕುಲ್ ಪ್ರೀತ್ ಸಿಕ್ಕಾಪಟ್ಟೆ ಬ್ಯುಸಿಯಿದ್ದಾರೆ. ರನ್ ವೇ 34 , ಡಾಕ್ಟರ್ ಜಿ , ಅಟ್ಯಾಕ್ , ಥ್ಯಾಂಕ್ ಗಾಡ್ , ಅಯಲಾನ್ , ಮಿಷನ್ ಸಿಂಡ್ರೆಲಾ , 31 ಅಕ್ಟೋಬರ್ ಲೇಡೀಸ್ ನೈಟ್ , ಇಂಡಿಯನ್ 2 ಸಿನಿಮಾಗಳಲ್ಲಿ ಬ್ಯುಸಿಯಿರಲಿದ್ದಾರೆ.