ರಿಲೀಸ್ ಗೂ ಒಂದು ದಿನ ಮುಂದೇ RRR ಸಿನಿಮಾ ನೋಡಬಹುದು..!
ಇಡೀ ಭಾರತೀಯ ಸಿನಿಮಾರಂಗವೇ ಕಾದು ಕುಳಿತಿರುವ , ಕ್ರೇಜ್ ಹುಟ್ಟು ಹಾಕಿರೋ ಸಿನಿಮಾ ರಾಜಮೌಳಿ ನಿರ್ದೇಶನದ RRR ಸಿನಿಮಾ.. ಈ ಮಾರ್ಚ್ 25 ಕ್ಕೆ ರಿಲೀಸ್ ಆಗಲಿದ್ದು , ವಿಶ್ವಾದ್ಯಂತ ಜಕ್ಕಣ್ಣನ ಟೀಮ್ ಭರ್ಜಜರಿ ಪ್ರಚಾರ ನಡೆಸುತ್ತಿದೆ.
ರಾಮ್ ಚರಣ್ , ಜ್ಯೂನಿಯರ್ ಎನ್ ಟಿ ಆರ್ , ಆಲಿಯಾ ಭಟ್ , ಅಜಯ್ ದೇವಗನ್ ಸೇರಿದಂತೆ ದೊಡ್ಡ ದೊಡ್ಡ ಸೂಪರ್ ಸ್ಟಾರ್ ಗಳನ್ನೇ ಒಳಗೊಂಡಿರುವ ಈ ಸಿನಿಮಾ ಬಗ್ಗೆ ಕಾತರತೆ ಹೆಚ್ಚಿದೆ. ಸಿನಿಮಾ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿದೆ.
ಈ ಸಿನಿಮಾದ ಫಟ್ಸ್ ಡೇ ಫಟ್ಸ್ ಶೋ ನೋಡಬೇಕು ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ.. ಆದ್ರೆ ಅಂತಹವರಿಗೆ ಸಿನಿತಂಡದಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.
ರಿಲೀಸ್ ಗೂ ಒಂದು ದಿನ ಮುಂಚೆಯೇ ಈ ಸಿನಿಮಾ ನೋಡುವ ಅವಕಾಶದೊಂದು ಸಿಗಲಿದೆ ಎನ್ನಲಾಗ್ತಿದೆ..
ಹೌದು… ಮಾರ್ಚ್ 25 ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿರುವ ಈ ಸಿನಿಮಾವನ್ನ ಒಂದು ದಿನ ಮುಂಚಿತವಾಗಿ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನ ಏರ್ಪಡಿಸುವ ಬಗ್ಗೆ ಸಿನಿಮಾತಂಡ ನಿರ್ಧರಿಸಿ ಪ್ಲಾನ್ ಮಾಡುತ್ತಿದೆ ಎಂಬ ಸುದ್ದಿ ಇದೀಗ ಸಿಕ್ಕಿದೆ.
ಮಾರ್ಚ್ 24ರ ಸಂಜೆ ಮತ್ತು ರಾತ್ರಿ ದೇಶದ ಅನೇಕ ಕಡೆಗಳಲ್ಲಿ ಪೇಯ್ಡ್ಪ್ರೀಮಿಯರ್ ಶೋ ನಡೆಯಲಿದೆ ಎನ್ನಲಾಗಿದೆ. ಆದ್ರೆ ಈ ಸುದ್ದಿ 50 % ಖುಷಿ ಕೊಟ್ಟರೂ ಮತ್ತೊಂದೆಡೆ ದುಬಾರಿ ದುಡ್ಡು ಕೊಟ್ಟು ಶೋ ನೋಡಲಾಗದ ಬೇಸರವೂ ಅಭಿಮಾನಿಗಳಲ್ಲಿದೆ..
ಹೌದು.. ಈ ಪ್ರೀಮಿಯರ್ ಶೋ ದರ ಅಧಿಕವಾಗಿರಲಿದೆ ಎನ್ನಲಾಗಿದೆ. ಸಿನಿಮಾ ರಿಲೀಸ್ ಬಳಿಕ ಟಿಕೆಟ್ ಗೆ ಇರುವ ದರ ಈ ಶೋಗೆ ಇರುವುದಿಲ್ಲ. ಈ ಪ್ರೀಮಿಯರ್ ಶೋ ದರ ರಿಲೀಸ್ ನಂತರದ ಟಿಕೆಟ್ ದರಕ್ಕಿಂತ ಅಧಿಕವಾಗಿರಲಿದೆ ಎನ್ನಲಾಗಿದೆ..