Samantha : ತಮ್ಮ ಮದುವೆ ಸೀರೆ ನಾಗಚೈತನ್ಯ ಕುಟುಂಬಕ್ಕೆ ವಾಪಸ್ ಕೊಟ್ಟ ಸಮಂತಾ
ಹೈದ್ರಾಬಾದ್ : ಕಳೆದ ವರ್ಷ ಅಕ್ಟೋಬರ್ ವೇಳೆಗೆ ಟಾಲಿವುಡ್ ನ ಸ್ಟಾರ್ ಜೋಡಿ ಎನಿಸಿಕೊಂಡಿದ್ದ ಸಮಂತಾ ನಾಗಚೈತನ್ಯ ಅವರು ಡಿವೋರ್ಸ್ ಪಡೆಯುವ ಮೂಲಕ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು.. ಡಿವೋರ್ಸ್ ನಂತರ ಇಬ್ಬರೂ ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿದ್ದಾರೆ.
ಇಬ್ಬರೂ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದಾರೆ.. ಆದ್ರೆ ಆಗಾಗ ಸೋಷಿಯಲ್ ಮೀಡಿಯಾದಲ್ಲೀ ಇಬ್ಬರೂ ತಮ್ಮ ಡಿವೋರ್ಸ್ ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ.. ಇದೀಗ ಸಮಂತಾ ನಾಗಚೈತನ್ಯ ಕುಟುಂಬ ತಮಗೆ ಮದುವೆಗೆ ನೀಡಿದ್ದ ದುಬಾರಿ ಬೆಲೆಯ ರೇಷ್ಮೆ ಸೀರೆಯನ್ನ ವಾಪಸ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಅಲ್ಲದೇ ಇದರಿಂದಾಗಿ ಅಕ್ಕಿನೇನಿ ಕುಟುಂಬಕ್ಕೆ ಇರಿಸು ಮುರಿಸು ಉಂಟಾಗಿದೆ ಎಂಬ ಚರ್ಚೆಗಳಾಗುತ್ತಿದೆ.