ರಶ್ಮಿಕಾಗೆ ಸಿಗಲಿದೆ ಎಮದು ಹೇಳಲಾಗುತ್ತಿದ್ದ ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನಿಮಾದ ನಾಯಕಿಯಾಗುವ ಅದೃಷ್ಟ ಕರಾವಳಿ ಬೆಡಗಿ ಪೂಜಾ ಹೆಗ್ಡೆಗೆ ಒಲಿದು ಬದಿತ್ತು..
ಆದ್ರೆ ಈಗ ಮತ್ತೊಂದು ದಳಪತಿ ವಿಜಯ್ ಸಿನಿಮಾ.. ಅವರ 66 ನೇ ಸಿನಿಮಾದಲ್ಲಿ ಪೂಜಾ ಹೆಗ್ಡೆಯೇ ನಾಯಕಿ ಎನ್ನಲಾಗ್ತಿತ್ತು.. ಆದರೆ ಅವರ ಅವಕಾಶವನ್ನ ರಶ್ಮಿಕಾ ಮಂದಣ್ಣ ಕಿತ್ತುಕೊಂಡಿದ್ದು , ಒಂದ್ ರೀತಿ ಮುಯಿಗೆ ಮುಯಿ ತೀರಿಸಿಕೊಂಡಿದ್ದಾರೆ.. ಇಬ್ಬರಿಗೂ ಅವರದ್ದೇ ಆದ ಫ್ಯಾಂಡಮ್ ಇದೆ.. ಇಬ್ಬರಿಗೂ ವಿಭಿನ್ನವಾದರೂ ಒಂದೇ ಲೆವೆಲ್ ನ ಇಮೇಜ್ ಇದೆ.. ಇಬ್ಬರ ಪಾಪ್ಯುಲ್ಯಾರಿಟಿ ನಡುವೆಯೂ ದೊಡ್ಡ ಅಂತರವಿಲ್ಲ.. ಒಂದ್ ಲೆಕ್ಕಾರದಲ್ಲಿ ನೋಡಿದ್ರೆ,,, ಇವರಿಬ್ಬರು ಕಾಂಪಿಟೇಟರ್ ಗಳು.. ಇಬ್ಬರೂ ಸೌತ್ ಹಾಗೆ ಬಾಲಿವುಡ್ ನಲ್ಲಿ ಗುರುತಿಸಿಕೊಂಡಿರುವವರೇ..
ಇದೀಗ ಪೂಜಾ ಹೆಗ್ಡೆ ಚಾನ್ಸ್ ರಶ್ಮಿಕಾ ಪಾಲಾಗಿದೆ. ಇದೇ ಮೊದಲ ಬಾರಿಗೆ ರಶ್ಮಿಕಾ ದಳಪತಿ ವಿಜಯ್ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.. ಆದ್ರೆ ರಶ್ಮಿಕಾ ಹೆಸರನ್ನ ಸಿನಿಮಾತಂಡ ಇನ್ನೂ ಅಧಿಕೃತಗೊಳಿಸಿಲ್ಲವಾದ್ರೂ ಬಹುತೇಕ ಅವರೇ ನಾಯಕಿ ಎನ್ನುವುದು ಫೈನಲ್ ಆಗಿದೆ.