ರಾಮ್ ಚರಣ್ , ಜ್ಯೂನಿಯರ್ ಎನ್ ಟಿ ಆರ್ , ಆಲಿಯಾ ಭಟ್ , ಅಜಯ್ ದೇವಗನ್ ಸೇರಿದಂತೆ ದೊಡ್ಡ ದೊಡ್ಡ ಸೂಪರ್ ಸ್ಟಾರ್ ಗಳನ್ನೇ ಒಳಗೊಂಡಿರುವ RRR ಸಿನಿಮಾ ಬಗ್ಗೆ ಕಾತರತೆ ಹೆಚ್ಚಿದೆ. ಈ ಮಾರ್ಚ್ 25 ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಸುಮಾರು 400 ಕೋಟಿ ಬಜೆಟ್ ನಲ್ಲಿ ಸಿನಿಮಾ ತಯಾರಾಗಿದೆ ಎನ್ನುವ ಮಾಹಿತಿ ಇದೆ..
ಮಾರ್ಚ್ 14ಕ್ಕೆ ‘RRR’ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗ್ತಿದೆ.
ನೀಡುವ ಎಂಎಂ ಕೀರವಾಣಿ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಈಗಾಗಲೇ ದೋಸ್ತಿ ಹಾಗೂ ಹಳ್ಳಿನಾಟು ಹಾಡುಗಳು ರಿಲೀಸ್ ಆಗಿ ಧೂಳೆಬ್ಬಿಸಿವೆ..
ಇದೀಗ RRR ತಂಡ ಮತ್ತೊಂದು ಸಾಂಗ್ ಅನ್ನು ಬಿಡುಗಡೆ ಮಾಡುತ್ತಿದೆ. ಮಾರ್ಚ್ 14ನೇ ತಾರೀಖಿನಂದು ಎತ್ತುವ ಜಂಡಾ ಹಾಡು ರಿಲೀಸ್ ಮಾಡುತ್ತಿದೆ. ಎಲ್ಲಾ ಭಾಷೆಗಳಲ್ಲೂ ಹಾಡು ರಿಲೀಸ್ ಆಗಲಿದೆ.
ಡಿವಿವಿ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಆರ್ ಆರ್ ಆರ್ ಸಿನಿಮಾಗೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ.
ಇನ್ನೂ ವಿಶೇಷ ಎಂದರೆ ಸಿನಿಮಾ ಸಿನಿಮಾ ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್ ಭಾಷೆಗಳಿಗೂ ಡಬ್ ಆಗಲಿದೆ. ಈ ಚಿತ್ರ ಮಾರ್ಚ್ 25ರಂದು 2022ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.