James : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಸಿನಿಮಾದ ಮತ್ತೊಂದು ಹಾಡು ಇಂದು ರಿಲೀಸ್ ಆಗಿದೆ.. ಈ ಮೂಲಕ ಸಿನಿಮಾ ತಂಡ ಅಪ್ಪು ಅಭಿಮಾನಿಗಳಿಗೆ ಬಿಗ್ ಗಿಫ್ಟ್ ನೀಡಿದ್ದು ಅಭಿಮಾನಿಗಳ ಕಾತರತೆ ಮತ್ತಷ್ಟು ಹೆಚ್ಚಿಸಿದೆ.. ಸಲಾಂ ಸೋಲ್ಜರ್ ಟೈಟಲ್ ನ ಈ ಹಾಡು ಸಖತ್ ಪವರ್ ಫುಲ್ ಆಗಿಯೇ ಇದೆ. ಈ ಹಾಡನ್ನ ನಮ್ಮ ದೇಶ ಕಾಯುವ ನಮ್ಮ ಹೆಮ್ಮೆಯ ಸೈನಿಕರಿಗಾಗಿ ಅರ್ಪಣೆ ಮಾಡಲಾಗಿದೆ.. ಈ ಹಾಡು ಕೇಳಿದರೆ , ರೋಮಾಂಚವಾಗುತ್ತೆ.
ಆ ಸಿಡಿಲು ಮಳೆಯೇ ಬಂದರೂ , ಸಾಗರವೇ ಉಕ್ಕಿ ಹರಿದರೂ , ಎದುರಾಳಿ ಎದುರಿಗೆ ನಿಂತರೂ , ನೀ ಮುನ್ನುಗ್ಗಿ ದೇಶವ ಕಾಯುವೆ ಎನ್ನುವ ಈ ಹಾಡಿನ ಮೂಲಕ ದೇಶ ಕಾಯುವ ನಮ್ಮ ಹೆಮ್ಮೆಯ ಸೈನಿಕರಿಗೆ ಒಂದು ಸಲಾಮ್ ಹೇಳಲಾಗಿದೆ. ಅಪ್ಪು ಸೈನಿಕನ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ನೋಡ್ತಿದ್ರೆ ಮೈ ಝೂ ಎನಿಸುತ್ತೆ.. ರಣ ರಣ ರಣ ಕಲಿಯೋ , ಯುದ್ಧ ಭೂಮಿಯಲ್ಲಿ ಯುವ ಕಲಿಯೋ ,,, ಧಗ ಧಗ ಧಗ ಧಗ ಉರಿಯೋ ಸೂರ್ಯನ್ನೇ ಸುಡುವ ಉಸಿರೋ… ಎಂದು ದೇಶದ ಸೈನಿಕರ , ಧೈರ್ಯ , ತ್ಯಾಗ , ಶೌರ್ಯ , ಹೋರಾಟ ಎಲ್ಲದರ ಸಣ್ಣ ಝಳಕ್ ತೋರಿಸಲಾಗಿದೆ ಹಾಡಿನಲ್ಲಿ. ಅದ್ರಲ್ಲೂ ಅಪ್ಪು ಸೈನಿಕನ ಅವತಾರದಲ್ಲಿ ಕಾಣಿಸಿಕೊಂಡಿರುವುದು ಹಾಡಿನ ಫೈಯರ್ ಹೆಚ್ಚಿಸಿದೆ.
ಚರಣ್ ವರಾಜ್ ಮ್ಯೂಸಿಕ್ ಪವರ್ ಫುಲ್ ಆಗಿದೆ. ಚಚೇತನ್ ಕುಮಾರ್ ಲಿರಿಕ್ಸ್ ಇದೆ.. ಹಾಡಿಗೆ ಸಂಜಿತ್ ಹೆಗ್ಡೆ , ಚರಣ್ ರಾಜ್ ಧ್ವನಿಯಾಗಿ ಜೀವ ತುಂಬಿದ್ದಾರೆ. ಸಿನಿಮಾದಲ್ಲಿ ಪ್ರಿಯಾಂಕಾ ಆನಂದ್ ಅವರು ಅಪ್ಪುಗೆ ಜೋಡಿಯಾಗಿದ್ದಾರೆ..
ಅಂದ್ಹಾಗೆ ಈ ಸಿನಿಮಾ ಮಾರ್ಚ್ 17 ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಮಾರ್ಚ್ 14 ರಂದು ಅರಮನೆ ಮೈದಾನದಲ್ಲಿ ಪ್ರೀ ರಿಲೀಸ್ ಈವೆಂಟ್ ನಡೆಸಲು ಸಿನಿಮಾತಂಡ ತಯಾರಿ ನಡೆಸಿಕೊಳ್ತಿದೆ.. ಜೇಮ್ಸ್ ಸಿನಿಮಾ ರಿಲೀಸ್ ಆದದ ನಂತರ ಒಂದು ವಾರದ ವರೆಗೂ ಕಾರ್ನಾಟಕದ ಯಾವ ಥಿಯೇಟರ್ ಗಳಲ್ಲೂ ಬೇರೆ ಯಾವುದೇ ಸಿನಿಮಾಗಳು ರಿಲೀಸ್ ಆಗುವುದಿಲ್ಲ.. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗುತ್ತಿದ್ದು , ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿ ಪ್ರೇಕ್ಷಕರು ಸಹ ಈ ಸಿನಿಮಾಗಾಗಿ ಕಾಯುತ್ತಿದ್ಧಾರೆ.
ವೀರೇಶ್ ಥಿಯೇಟರ್ ಸೇರಿದಂತೆ ಇತರೇ ಥಿಯೇಟರ್ ಗಳ ಮುಂದೆ ಈಗಿನಿಂದಲೇ ಅಪ್ಪು ಕಟೌಟ್ ಗಳನ್ನ ರೆಡಿಮಾಡಲಾಗ್ತಿದೆ.. ಜೇಮ್ಸ್ ನ ಪಟಾಕಿ ಸಿಡಿಸಿ , ಹಾಲಿನಾಭಿಷೇಕ ಮಾಡಿ ಅದ್ಧೂರಿಯಾಗಿಯೇ ಅಅಭಿಮಾನಿಗಳು ಸ್ವಾಗತಿಸಲಿದ್ದಾರೆ.. ಈ ಸಿನಿಮಾ ವಿಶ್ವಾದ್ಯಂತ 15 ಕ್ಕೂ ಹೆಚ್ಚು ದೇಶಗಳಲ್ಲಿ 4000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಾಣಲಿದೆ.. ಈ ಹಿಂದೆ ರಿಲೀಸ್ ಆಗಿದ್ದ ಸಿನಿಮಾದ ಟೀಸರ್ ಮತ್ತೆ ಟ್ರೇಡ್ ಮಾರ್ಕ್ ಹಾಡು ಪವರ್ ಫುಲ್ ಆಗಿಯೇ ಸೌಂಡ್ ಮಾಡಿತ್ತು.. ಇದೀಗ ಇಂಟ್ರಡಕ್ಷನ್ ಹಾಡು ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ.