ಪುಷ್ಪ ಅಂದ್ರೆ ಥಟ್ ಅಂತ ನೆನಪಾಗೋದೆ ತಗ್ಯದೇ ಲೇ , ಫೈಯರ್ – ಫ್ಲವರ್ ಡೈಲಾಗ್ , ಶ್ರೀವಲ್ಲಿ ಸಾಂಗ್ , ಅಲ್ಲು ಅರ್ಜುನ್ ಲುಕ್ಸ್ , ಎಲ್ಲದಕ್ಕಿಂದ ಮುಖ್ಯವಾಗಿ ಸಿನಿಮಾದ ಹೈಲೇಟ್ ಊ ಅಂಟಾವಾ ಮಾವ ಊಹೂ ಅಂಟಾವಾ ಮಾವ ಸಾಂಗ್ ,,, ಹಾಡಿಗೆ ಸಮಂತಾ ಸ್ಟೆಪ್ಸ್ , ಗ್ಲಾಮರಸ್ ಲುಕ್..
ಸಮಂತಾ ರುಥ್ ಪ್ರಭು ಡಿವೋರ್ಸ್ ನಂತರ ಈ ಹಾಡಿಗೆ ಹೆಜ್ಜೆ ಹಾಕಿದ್ದು ಒಂದೆಡೆಯಾದ್ರೆ,, ಇದು ಅವರ ಮೊದಲ ಐಟಂ ಸಾಂಗ್ ಆಗಿತ್ತು.. ಒಂದ್ ರೀತಿ ಎಷ್ಟೋ ಜನರು ಈ ಹಾಡಿಗೋಸ್ಕರ ಸಿನಿಮಾ ನೋಡಿದ್ರು.. ಸೋಷಿಯಲ್ ಮೀಡಿಯಾದಲ್ಲೀ ಇನ್ನೂ ಈ ಹಾಡಿನ ಕ್ರೇಜ್ ಕಡಿಮೆಯಾಗಿಲ್ಲ.. ಯೂಟ್ಯೂಬ್ ನಲ್ಲಿ ತಲೆಗು, ಹಿಂದಿ , ಕನ್ನಡ , ಮಲಯಾಳಂ , ತಮಿಳ್ ಎಲ್ಲಾ ವರ್ಷನ್ ನಲ್ಲೂ ಹಾಡು ಭಾರೀ ಸೌಂಡ್ ಮಾಡಿತ್ತು..
ಈ ಹಾಡಿನಲ್ಲಿ ಸ್ಯಾಮ್ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು.. ಸಮಂತಾ ಬಹುತೇಕ ಸಿನಿಮಾಗಳಲ್ಲಿ ಕ್ಯೂಟ್ ಆಗಿ ಬಬ್ಲಿ ಬಬ್ಲಿಯಾಗಿ ಕಾಣಿಸಿಕೊಂಡಿದ್ದಾರೆ.. ಸ್ಟಾರ್ ಗಳ ಜೊತೆಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.. ಆದ್ರೂ ಊ ಅಂಟಾವಾ ಐಟಂ ಹಾಡಿನ ನಂತರ ಜನರು ಸಮಂತಾರ ಹಿಂದಿನ ಸಿನಿಮಾಗಳ ಬಗ್ಗೆ ಮರೆತೇ ಹೋಗಿದ್ದಾರಂತೆ..
ಹೀಗಂತ ಅವರೇ ಹೇಳಿಕೊಂಡಿದ್ದಾರೆ.
ಹೌದು.. ಮಾರ್ಚ್ 10 ರಂದು ನಡೆದ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಸಮಂತಾ ಭಾಗಿಯಾಗಿದ್ದರು.. ಸಮಂತಾ ಈ ಕಾರ್ಯಕ್ರಮದಲ್ಲಿ ಹೈಲೇಟ್ ಆಗಿದ್ದು , ಅವರ ಡ್ರೆಸ್ಸಿಂಗ್ ಸೆನ್ಸ್ ಮತ್ತೆ ಚಾರ್ಮ್ ನಿಂದ.. ಸಮಂತಾ ಹಸಿರು ಬಣ್ಣದ ಗೌನ್ ನಲ್ಲಿ ಗಾರ್ಜಿಯಸ್ ಆಗಿ ದೀವಾ ರೀತಿ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಿ ಕಾರ್ಯಕ್ರಮದ ಫೈಯರ್ ಹೆಚ್ಚಿಸಿದ್ದರು.. ಫ್ಯಾಷನ್ ಡಿಸೈನರ್ ಗೌರಿ ಹಾಗೂ ನೈನಿಕಾ ಈ ಕಾಸ್ಟ್ಯೂಮ್ ಅನ್ನು ಡಿಸೈನ್ ಮಾಡಿದ್ದರು.
ಇದೇ ಕಾರ್ಯಕ್ರಮದಲ್ಲಿ ಸ್ಟೇಜ್ ಮೇಲೆ ಮಾತನಾಡಿರುವ ಸ್ಯಾಮ್ , ಊ ಅಂಟಾವ ಸಾಂಗ್ ಬಳಿಕ ತೆಲುಗು ಪ್ರೇಕ್ಷಕರಷ್ಟೇ ಅಲ್ಲ. ಇಡೀ ದೇಶದ ಜನರು ನಾನು ಇದೂವರೆಗೂ ನಟಿಸಿದ ಸಿನಿಮಾಗಳನ್ನೇ ಮರೆತು ಬಿಟ್ಟಿದ್ದಾರೆ. ಈಗ ಬರೀ ಊ ಅಂಟಾವ ಹಾಡಿನಿಂದಲೇ ನನ್ನನ್ನು ಗುರುತಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ,.
ಅಲ್ಲದೇ ಜನರು ನನ್ನ ಮೇಲೆ ಪ್ರೀತಿ ವ್ಯಕ್ತಪಡಿಸುತ್ತಿರುವ ರೀತಿಯನ್ನು ಬಣ್ಣಿಸಲು ಸಾಧ್ಯವೇ ಇಲ್ಲ. ಊ ಅಂಟಾವ ಹಾಡು ಈ ಮಟ್ಟಕ್ಕೆ ಅದು ಸಹ ಪ್ಯಾನ್ ಎಲ್ಲಾ ಭಾಷಷೆಗಳಲ್ಲೂ ಹಿಟ್ ಆಗುತ್ತೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.