Bhavana menon : ಬಹಳ ವರ್ಷಗಳ ನಂತರ ಮಲಯಾಳಂ ಸಿನಿಮಾ ಮಾಡುತ್ತಿರುವ ಭಾವನಾ
ಕನ್ನಡ , ಮಲಯಾಳಂ , ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೂಲತಃ ಮಲಯಾಳಂನ ನಟಿ ಭಾವನಾ ಮೆನನ್ ಕೆಲವು ವರ್ಷಗಳ ಹಿಂದೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು..
ಇತ್ತೀಚೆಗೆ ಈ ಬಗ್ಗೆ ಧ್ವನಿ ಎತ್ತಿದ್ದರು.. ಕನ್ನಡದಲ್ಲಿ ಇತ್ತೀಚೆಗೆ ಅಂದರೆ ಇನ್ಸ್ ಪೆಕ್ಟರ್ ವಿಕ್ರಮ್ , ಭಜರಂಗಿ 2 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.. ಆದ್ರೆ ಕೆಲ ವರ್ಷಗಳಿಂದ ಮಲಯಾಳಂ ಚಿತ್ರರಂಗದಿಂದ ದೂರವಿದ್ದರು.
ಭಾವನಾ ಮೆನನ್ ಇದೀಗ ಮತ್ತೆ ಮಲಯಾಳಂ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದು , ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅಮಾಹಿತಿ ನೀಡದ್ದಾರೆ.
ತಮ್ಮ ಈ ಸಿನಿಮಾದ ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ ಭಾವನಾ ಮೆನನ್.
‘ಎನ್ಟಿಕಕ್ಕಕ್ಕೋರು ಪ್ರೇಮಂಡರ್ನ್’ ಎಂಬ ಟೈಟಲ್ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ರಿಲೀಸ್ ಆಗಿರುವ ಪೋಸ್ಟರ್ ಡಿಫರೆಂಟ್ ಆಗಿದೆ. ಆದಿಲ್ ಅಶ್ರಫ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
ಈ ಸಿನಿಮಾದ ಫಸ್ಟ್ ಪೋಸ್ಟರ್ ಅನ್ನ ಮಾಲಿವುಡ್ ನ ಸ್ಟಾರ್ ನಟ ಮಮ್ಮುಟ್ಟಿ ಬಿಡುಗಡೆ ಮಾಡಿರುವುದು ವಿಶೇಷ.
2017 ರಲ್ಲಿ, ಭಾವನಾ ಲೈಂಗಿಕ ದೌರ್ಜನ್ಯದಂತಹ ಕಹಿ ಘಟನೆಯನ್ನು ಎದುರಿಸಿದ್ದರು. ಈ ಘಟನೆ ಆದ ನಂತ್ರದಿಂದ ಭಾವನಾ ಮೆನನ್ ಮಲಯಾಳಂ ಚಿತ್ರರಂಗದಿಂದ ದೂರ ಉಳಿದಿದ್ದರು.