Tollywood : ಪವನ್ ಕಲ್ಯಾಣ್ ಸಿನಿಮಾದಲ್ಲಿ ‘ಮಿರ್ಜಾಪುರ’ ಖ್ಯಾತಿಯ ಪಂಕಜ್
‘ಮಿರ್ಜಾಪುರ’ ಖ್ಯಾತಿಯ ನಟ ಪಂಕಜ್ ತ್ರಿಪಾಠಿ ಅವರೀಗ ಪವನ್ ಕಲ್ಯಾಣ್ ಅವರ ಟಾಲಿವುಡ್ ಚೊಚ್ಚಲ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಪವನ್ ಕಲ್ಯಾಣ್ ಅವರ ಮುಂಬರುವ ಸಿನಿಮಾ ‘ಭಾವದೇಯುಡು ಭಗತ್ ಸಿಂಗ್’ ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲು ನಟ ಪಂಕಜ್ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ.
ನಿರ್ಮಾಪಕರು ಈ ಚಿತ್ರಕ್ಕೆ ಸಂಬಂಧಿಸಿದ ವಿಷಯಗಳನ್ನ ಸಸ್ಪೆನ್ಸ್ ಆಗಿ ಉಳಿಸಿದ್ದಾರೆ. ಪವನ್ ಅವರ ಚಿತ್ರದ ಭಾಗವಾಗಲು ಸಂತೋಷವಾಗಿರುವ ಪಂಕಜ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗ್ತಿದೆ.