James : ವಿಶ್ವಾದ್ಯಂತ ಜೇಮ್ಸ್ ರಿಲೀಸ್… ಥಿಯೇಟರ್ ಗಳ ಮುಂದೆ ಫ್ಯಾನ್ಸ್ ಜಾತ್ರೆ…!!!
ಇಂದು ವಿಶ್ವದಾದ್ಯಂತ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ರಿಲೀಸ್ ಆಗಿದ್ದು , ಥಿಯೇಟರ್ ಗಳ ಮುಂದೆ ಅಪ್ಪು ಅಭಿಮಾನಿಗಳು ಜಾತ್ರೆ ಮಾಡ್ತಿದ್ದಾರೆ.. ಎಷ್ಟೋ ಥಿಯೇಟರ್ ಗಳ ಮುಂದೆ ಅನ್ನದಾನ ನಡೆಯುತ್ತಿದ್ರೆ , ಇನ್ನೂ ಹೆಲವೆಡೆ ಬಡವರಿಗೆ ಫ್ರೀ ಟಿಕೆಟ್ಸ್ ಕೊಡಿಸ್ತಿದ್ದಾರೆ ಫ್ಯಾನ್ಸ್.
ಕರುನಾಡ ರಾಜರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ರಿಲೀಸ್ ಆಗಿದೆ. ಪಂಚ ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಿರುವ ಜೇಮ್ಸ್ ಸಿನಿಮಾ ಹಿಂದೆಂದೂ ಕಂಡು ಕೇಳರಿಯದ ಓಪನಿಂಗ್ ಸಿಕ್ಕಿದೆ.
ಇಂದು ಮಾರ್ಚ್ 17 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಇದೇ ಮೊದಲ ಬಾರಿಗೆ ಅಪ್ಪು ಇಲ್ಲದೇ ಅವರ ಹುಟ್ಟುಹಬ್ಬವನ್ನ ಆಚರಣೆ ಮಾಡಲಾಗುತ್ತಿದೆ. ರಾಜ್ ಕುಟುಂಬ ಇಂದು ಮಧ್ಯ ರಾತ್ರಿ ಅಪ್ಪು ಸಮಾಧಿ ಬಳಿ ಕೇಕ್ ಕಟ್ ಮಾಡಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿದೆ.
ರಾಘಣ್ಣ ಆಕಾಶದತ್ತ ನೋಡಿ ಅಪ್ಪುಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾ ಇಂದು ಅಪ್ಪುಮಯವಾಗಿದೆ. ಅಪ್ಪು ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳನ್ನು ಆವರಿಸಿಕೊಂಡಿವೆ.