KGF 2 : ಉಸಿರು ಬಿಗಿ ಹಿಡಿದಿಟ್ಟುಕೊಳ್ಳಿ ಬರುತ್ತಿರೋದು ತೂಫಾನ್..!!
ಇಡೀ ಭಾರತ ಕಾಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಪ್ರಶಾಂತ್ ನೀಲ್ ಅವರ KGF 2 ಸಿನಿಮಾ ರಿಲೀಸ್ ಗೆ ತುಂಬಾದಿನಗಳ ಉಳಿದಿಲ್ಲ.. ಈಗಿನಿಂದಲೇ ಕೌಂಟ್ ಡೌನ್ ಶುರುವಾಗಿದೆ..
ಈ ನಡುವೆ ಸಿನಿಮಾತಂಡ ಅಭಿಮಾನಿಗಳಿಗೆ ತೂಫಾನಿ ನ್ಯೂಸ್ ಕೊಟ್ಟಿದ್ದು ಅಭಿಮಾನಿಗಳ ಕಾತರತೆ ಹೆಚ್ಚಿಸಿದೆ.. KGF 2 ಚಿತ್ರದ ‘ತೂಫಾನ್’ ಲಿರಿಕಲ್ ವಿಡಿಯೋ ಸಾಂಗ್ ಮಾರ್ಚ್ 21 ಕ್ಕೆ ಬಿಡುಗಡೆಯಾಗಲಿದೆ.
![KGF 2 Trailer - cinibazaar](http://cinibazaar.com/wp-content/uploads/2022/03/kgf-2.jpg)
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿರುವ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿ ನಟಿಸಿರುವ “ಕೆ.ಜಿ.ಎಫ್ ೨” ಚಿತ್ರದ ತೂಫನ್ ಲಿರಿಕಲ್ ವಿಡಿಯೋ ಸಾಂಗ್ ಮಾರ್ಚ್ 21ರಂದು ಬೆ.11.7ಕ್ಕೆ ಬಿಡುಗಡೆಯಾಗಲಿದೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಪ್ರತಿಷ್ಠಿತ ಲಹರಿ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕು ಪಡೆದುಕೊಂಡಿದೆ.
ಏಪ್ರಿಲ್ 14ರಂದು ಈ ಚಿತ್ರ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.