ಮಾಲಿವುಡ್ ಸ್ಟಾರ್ ನಟ ಮಮ್ಮುಟಿ ಅವರ ಮುಂಬರುವ ಮಲಯಾಳಂ ಚಿತ್ರ ‘ಪುಝು’ OTT ಪ್ಲಾಟ್ಫಾರ್ಮ್ನಲ್ಲಿ ನೇರವಾಗಿ ಪ್ರದರ್ಶನಗೊಳ್ಳಲಿದೆ. ಇತ್ತೀಚೆಗಷ್ಟೇ ಮಮ್ಮುಟಿ ಅವರ ಪುತ್ರನ ‘ಸೆಲ್ಯೂಟ್’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುವುದು ಖಾತ್ರಿಯಾದ ನಂತರ ಸಿನಿಮಾ ಮಂದಿರಗಳ ಮಾಲೀಕರು ಅವರನ್ನ ಬಹಿಷ್ಕರಿಸಲು ನಿರ್ಧಾರ ಮಾಡಿದ್ದರು.. ಮಾರ್ಚ್ 17 ರಂದು ಸೆಲ್ಯೂಟ್ ಒಟಿಟಿಯಲ್ಲಿ ರಿಲೀಸ್ ಆಗಿದೆ.. ಇದೀಗ ‘ಪುಝು’ ಚಿತ್ರವೂ ಒಟಿಟಿಗೆ ಮಣೆ ಹಾಕಿದೆ. ಬಿಡುಗಡೆಯ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.
‘ಪುಝು’ ಕಂಪ್ಲೀಟಾಗಿ ಫ್ಯಾಮಿಲಿ ಥ್ರಿಲ್ಲರ್ ಆಗಿದ್ದು, ಇದರಲ್ಲಿ ಮಮ್ಮುಟ್ಟಿಯವರು ವಿಭಿನ್ನವಾಗಿ ಕಾಣಿಸಿಕೊಳ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಮಮ್ಮುಟ್ಟಿ, “ಪುಝು ಚಿತ್ರದ ಕಥೆ ನನ್ನನ್ನು ಹೆಚ್ಚು ರೋಮಾಂಚನಗೊಳಿಸಿದೆ. ಒಬ್ಬ ನಟನಾಗಿ, ನನ್ನನ್ನು ನಾನು ಮರುಶೋಧಿಸುವುದನ್ನು ಮತ್ತು ಹೊಸ, ಹೆಚ್ಚು ಉತ್ತೇಜಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಯಾವಾಗಲೂ ನನ್ನ ಗುರಿಯಾಗಿದೆ. ಪುಝು ಆ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ” ಎಂದಿದ್ಧಾರೆ.
ಅಲ್ಲದೇ ನಾವು ನಂಬಿದ ಮತ್ತು ನಮ್ಮ ಹೃದಯವನ್ನು ಹೊಂದಿರುವ ಕಥೆಯನ್ನು ಹೇಳಲು ನಾವು ಪ್ರಯತ್ನಿಸಿದ್ದೇವೆ. ವೀಕ್ಷಕರು ಸಿನಿಮಾವನ್ನ ಇಷ್ಟಪಡುತ್ತಾರೆ ಎಂದು ಭಾವಿಸುತ್ತೇವೆ ” ಎಂದಿದ್ಧಾರೆ..
ಚಿತ್ರವು ತಂದೆ ಮತ್ತು ಮಗನ ನಡುವಿನ ಸಂಬಂಧವನ್ನು ಕೇಂದ್ರೀಕರಿಸುವ ಒಂದು ಹಿಡಿತದ ಥ್ರಿಲ್ಲರ್ ಕಥೆಯಾಗಿದೆ.
ಎಸ್ ಜಾರ್ಜ್ ಅವರ ಸಿನ್ ಸಿಲ್ ಸೆಲ್ಯುಲಾಯ್ಡ್ ಜೊತೆಗೆ ದುಲ್ಕರ್ ತಮ್ಮ ಬ್ಯಾನರ್ನಡಿಯಲ್ಲಿ ಪುಝು ಅನ್ನು ಸಹ ನಿರ್ಮಿಸಲಿದ್ದಾರೆ. ಚೊಚ್ಚಲ ನಿರ್ದೇಶಕಿ ರತೀನಾ ಪಿಟಿ ನಿರ್ದೇಶನದ ಈ ಚಿತ್ರದಲ್ಲಿ ಪಾರ್ವತಿ ತಿರುವೋತ್ತು ನಾಯಕಿಯಾಗಿ ನಟಿಸಲಿದ್ದಾರೆ.
#Puzhu Streaming Soon On @SonyLIV pic.twitter.com/7ktiiosd3g
— Mammootty (@mammukka) March 17, 2022