Puneeth Rajkumar : ಮೊದಲ ದಿನವೇ ವಿಶ್ವದಾದ್ಯಂತ James 30 ಕೋಟಿ ಕಲೆಕ್ಷನ್
ಮಾರ್ಚ್ 17 ರಂದು ಅಪ್ಪು ಬರ್ತ್ ಡೇ ಪ್ರಯುಕ್ತ ಅವರ ಕೊನೆಯ ಸಿನಿಮಾ ಜೇಮ್ಸ್ ರಿಲೀಸ್ ಆಗಿದ್ದು , ಈ ವಾರ ಪೂರ್ತಿ ರಾಜ್ಯಾದ್ಯಂತ ಜೇಮ್ಸ್ ಜಾತ್ರೆಯಿರಲಿದೆ.. ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಿದ್ದು , ರಾಜ್ಯದಲ್ಲೇ 400 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಜೇಮ್ಸ್ ಅಬ್ಬರಿಸುತ್ತಿದ್ದಾನೆ.. ಥಿಯೇಟರ್ ಗಳ ಮುಂದೆ ಈ ವಾರ ಪೂರ್ತಿ ಅಪಪ್ಪು ಅಭಿಮಾನಿಗಳ ಸಂಭ್ರಾಮಾಚಾರಣೆ ಇರಲಿದೆ. ಕರ್ನಾಟಕದ ಮಟ್ಟಿಗೆ ಜೇಮ್ಸ್ ಸಿನಿಮಾಗೆ ಸಿಕ್ಕ ಓಪನಿಂಗ್ ಈ ಹಿಂದೆ ಯಾವ ಸಿನಿಮಾಗೂ ಸಿಕ್ಕಿರಲಿಲ್ಲ. ಕನ್ನಡಿಗರು ಜೇಮ್ಸ್ ಸಿನಿಮಾವನ್ನು ಮಗುವಂತೆ ಸ್ವಾಗತಿಸಿದ್ದಾರೆ.
ವಿಶ್ವಾದ್ಯಂತ ಸುಮಾರು 4000 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಜೇಮ್ಸ್ ತೆರೆಕಂಡಿದೆ.. ವಿಶ್ವಾದ್ಯಂತ ಮೊದಲ ದಿನವೇ ಜೇಮ್ಸ್ ದಾಖಲೆಯ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.. ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಬೆಂಗಳೂರಿನಲ್ಲಿ ಮುಂದಿನ ಒಂದು ವಾರದ ವರೆಗಿನ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಅಗಿದೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಹರಿದಾಡುತ್ತಿವೆ.
ಮೂಲಗಳ ಪ್ರಕಾರ ಜೇಮ್ಸ್ ಸಿನಿಮಾ ಬೆಂಗಳೂರಿನಲ್ಲಿ ಮೊದಲ ದಿನ 8 ಕೋಟಿ ಕಲೆಕ್ಷನ್ ಮಾಡಿದೆಯಂತೆ. ವಿಶ್ವದಾದ್ಯಂತ ಒಂದೇ ದಿನಕ್ಕೆ 25 ರಿಂದ 30 ಕೋಟಿ ಕಲೆಕ್ಷನ್ ಎಂದು ಹೇಳಲಾಗುತ್ತಿದೆ. ಇದೇ ಟ್ರೆಂಡ್ ಮುಂದುವರಿದರೆ ವೀಕೆಂಡ್ ಎಲ್ಲಾ ಸೇರಿಕೊಂಡು ಒಟ್ಟಾರೆ 80 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಲಿದೆ ಎನ್ನಲಾಗ್ತಿದೆ.. ಅಷ್ಟೇ ಅಲ್ಲ ಬಾಕ್ಸ್ ಆಫೀಸ್ ನಲ್ಲಿ ಜಕೇಮ್ಸ್ 100 ಕೋಟಿ ಕೋಟಿ ಕ್ಲಬ್ ಸೇರಬಹುದೆಂಬ ಲೆಕ್ಕಾಚಾರವಿದೆ..