Bollywood Trolls : ಟ್ರಾನ್ಸ್ ಫರೆಂಟ್ ಬಿಕಿನಿ ಡ್ರೆಸ್ ಧರಿಸಿದ ಅನನ್ಯಾ … RIP ಫ್ಯಾಷನ್ ಎಂದ ನೆಟ್ಟಿಗರು
ಬಾಲಿವುಡ್ ಮಂದಿ ಇತ್ತೀಚೆಗೆ ಒಳ್ಳೆ ಸಿನಿಮಾಗಳನ್ನ ನೀಡೋದ್ರಲ್ಲಿ ಎಡವಿ ಬೀಲ್ತಿದ್ದು , ಸೌತ್ ಮುಂದೆ ಅವರ ಹವಾ ಮುಗೀತು ಅನ್ನೋ ಹೊತ್ತಲ್ಲೂ ಟ್ರೋಲ್ ಗಳಿಂದಲೇ ಹೆಚ್ಚು ಸುದ್ದಿಯಾಗ್ತಿದ್ದಾರೆ.. ಅದ್ರಲ್ಲೂ ನಟಿಯರು ತಮ್ಮ ಬಟ್ಟೆ ವಿಚಾರಕ್ಕೆ ಟ್ರೋಲ್ ಗೆ ಒಳಗಾಗ್ತಿರುತ್ತಾರೆ..
ಇನ್ನೂ ಯುವ ನಟಿ ಅನನ್ಯಾ ಪಾಂಡೆ (Ananya Pande) ಅಂತಾ ಸಿಕ್ಕಾಪಟ್ಟೆ ಬೋಲ್ಡ್ ಆದ ಡ್ರೆಸ್ಸಿಂಗ್ ಸೆನ್ಸ್ ನಿಂದಲೇ ಆಗಾಗ ಸುದ್ದಿಗೆ ಬರುತ್ತಿರುತ್ತಾರೆ.. ಇದೀಗ ಅವರು ಪಾರ್ಟಿಯೊಂದಕ್ಕೆ ಟ್ರಾನ್ಸ್ ಫರೆಂಟ್ ಬಿಕಿನಿ ಡ್ರೆಸ್ ಧರಿಸಿಕೊಂಡು ಹೋಗಿದ್ದು , ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.. ನೆಟ್ಟಿಗರಂತೂ ನಟಿಯನ್ನ ಹಿಗ್ಗಾಮುಗ್ಗ ಟ್ರೋಲ್ ಮಾಡ್ತಿದ್ಧಾರೆ.. ಬಿಕಿನಿ ಬೀಚ್ ನಲ್ಲಿ ಹಾಕೋದು , ಪಾರ್ಟಿಲಿ ಅಲ್ಲ ಎಂದೆಲ್ಲಾ ತರಾಟೆಗೆ ತೆಗೆದುಕೊಳ್ತಿದ್ದಾರೆ.
ಕೆಲವರಂತೂ ಎಲ್ಲಿಂದ ಹುಡುಕಿಕೊಂಡು ಬರುತ್ತೀರಾ ಇಂತಾ ಖರಾಬಾದ ಡಿಸೈನರ್ಸ್ ನ ಅಂದ್ರೆ ಇನ್ನೂ ಕೆಲವರು ವರ್ಸ್ಟ್ ಡ್ರೆಸ್ ಅವಾರ್ಡ್ ಸಿಗಬೇಕು , RIP ಫ್ಯಾಶನ್ ಎಂದೆಲ್ಲಾ ವ್ಯಂಗ್ಯಾತ್ಮಕವಾಗಿ ಟ್ರೋಲ್ ಗಳನ್ನ ಮಾಡ್ತಿದ್ಧಾರೆ..
ಅನನ್ಯಾ ಪಾಂಡೆ ಕಪ್ಪು ಟ್ರ್ಯಾನ್ಸ್ ಫರೆಂಟ್ ಬಟ್ಟೆ ಧರಿಸಿದ್ದು , ಒಳಗಡೆ ಬಿಕಿನಿ ಟೈಪ್ ಬಟ್ಟೆ ಧರಿಸಿದ್ದಾರೆ..
ಇದು ಫ್ಯಾಷನ್ ಅನ್ನೋಕಿಂತ ಅಸಹ್ಯವಾಗಿದೆ ಅನ್ನೋದು ನೆಟ್ಟಿಗರ ಅಭಿಪ್ರಾಯ.. ಅಂದ್ಹಾಗೆ ಅನನ್ಯಾ ಪಾಂಡೆ ಪಾರ್ಟಿಯಲ್ಲಿ ವಿಜಯ್ ದೇವರಕೊಂಡ ಜೊತೆಗೆ ಕಾಣಿಸಿಕೊಂಡಿದ್ದಾರೆ.. ಲೈಗರ್ ಸಿನಿಮಾದಲ್ಲಿ ಈ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.. ವಿಜಯ್ ದೇವರಕೊಂಡ ಹೇರ್ ಕಟ್ ಮಾಡಿಸಿ , ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ..