ಜೇಮ್ಸ್ ಇನ್ನೂ ನೋಡಿಲ್ಲ…. ನೋಡಬೇಕು : ಜ್ಯೂ. ಎನ್ ಟಿ ಆರ್
ದೇಶಾದ್ಯಂತ ಹವಾ ಸೃಷ್ಟಿ ಮಾಡಿರುವ RRR ಸಿನಿಮಾ ಮಾರ್ಚ್ 25 ಕ್ಕೆ ರಿಲೀಸ್ ಆಗಲಿದೆ.. ಸಿನಿಮಾ ತಂಡ ದೇಶ ವಿದೇಶಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದು , ದುಬೈನಿಂದ ಇಂದು ಬೆಂಗಳೂರಿಗೆ ಬಂದಿಳಿದಿದ್ದ ತಂಡ ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗಿದ್ದಾರೆ..
ಅಂದ್ಹಾಗೆ ಬೆಂಗಳೂರಿಗೆ ಬಂದಿಳಿದ ಸಂದರ್ಭದಲ್ಲಿ ಜ್ಯೂ. ಎನ್ ಟಿ ಆರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ.,. ಆತ್ಮೀಯ ಸ್ನೇಹಿತರಾದ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ನೋಡುವುದಕ್ಕೆ ಆಗಿಲ್ಲ. RRR ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿದ್ದು, ಸಿನಿಮಾ ರಿಲೀಸ್ ಆದ ತಕ್ಷಣವೇ ಜೇಮ್ಸ್ ಸಿನಿಮಾ ನೋಡುವೆ ಎಂದಿದ್ದಾರೆ..