Puneeth Rajkumar : 100 ಕೋಟಿ ಕ್ಲಬ್ ಸೇರಿದ ಜೇಮ್ಸ್…!!!
ಮಾರ್ಚ್ 17 ರಂದು ಅಪ್ಪು ಬರ್ತ್ ಡೇ ಪ್ರಯುಕ್ತ ಅವರ ಕೊನೆಯ ಸಿನಿಮಾ ಜೇಮ್ಸ್ ರಿಲೀಸ್ ಆಗಿದ್ದು , ಈ ವಾರ ಪೂರ್ತಿ ರಾಜ್ಯಾದ್ಯಂತ ಜೇಮ್ಸ್ ಜಾತ್ರೆಯಿರಲಿದೆ.. ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಿದ್ದು , ರಾಜ್ಯದಲ್ಲೇ 400 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಜೇಮ್ಸ್ ಅಬ್ಬರಿಸುತ್ತಿದ್ದಾನೆ.. ಥಿಯೇಟರ್ ಗಳ ಮುಂದೆ ಈ ವಾರ ಪೂರ್ತಿ ಅಪಪ್ಪು ಅಭಿಮಾನಿಗಳ ಸಂಭ್ರಾಮಾಚಾರಣೆ ಇರಲಿದೆ. ಕರ್ನಾಟಕದ ಮಟ್ಟಿಗೆ ಜೇಮ್ಸ್ ಸಿನಿಮಾಗೆ ಸಿಕ್ಕ ಓಪನಿಂಗ್ ಈ ಹಿಂದೆ ಯಾವ ಸಿನಿಮಾಗೂ ಸಿಕ್ಕಿರಲಿಲ್ಲ. ಕನ್ನಡಿಗರು ಜೇಮ್ಸ್ ಸಿನಿಮಾವನ್ನು ಮಗುವಂತೆ ಸ್ವಾಗತಿಸಿದ್ದಾರೆ.
ಜೇಮ್ಸ್ ಸಿನಿಮಾ ಮೊದಲ ದಿನವೇ ಕೇವಲ ಕರ್ನಾಟದಲ್ಲಿಯೇ ಅಂದಾಜು 35 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಅಂದ್ಹಾಗೆ ಮೊದಲ ದಿನವೇ ಇಷ್ಟು ಕಲೆಕ್ಷನ್ ಮಾಡಿದ ಮೊದಲ ಕನ್ನಡ ಸಿನಿಮಾ ಜೇಮ್ಸ್.. ಈ ಸಿನಿಮಾ ಎರಡನೇ ದಿನ ರಾಜ್ಯದಾದ್ಯಂತ 18 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. ಈ ವೀಕೆಂಡ್ನಲ್ಲಿ ಸಿನಿಮಾದ ಕಲೆಕ್ಷನ್ ದುಪ್ಪಟ್ಟಾಗಲಿರುವ ನಿರೀಕ್ಷೆಯಿದ್ದು , ರಾಜ್ಯದಲ್ಲಿ ಒಂದು ವಾರ ಪೂರ್ತಿ ಜೇಮ್ಸ್ ಹವಾ ಇರಲಿದೆ.. ಇದರ ಬೆನ್ನಲ್ಲೇ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರುವುದು ಪಕ್ಕಾ ಎನ್ನಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರು ಇದೆಲ್ಲ ಪುನೀತ್ ಅಣ್ಣನ ಪವರ್. ನನಗೆ ತಿಳಿದಿರುವಂತೆ ಈ ರೀತಿಯ ಓಪನಿಂಗ್ ಇನ್ಯಾವ ಸಿನಿಮಾಕ್ಕೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿಯೂ ಸಿಗುವುದಿಲ್ಲ. ಗಳಿಕೆಯಲ್ಲಿ ಮಾತ್ರವಲ್ಲ ಹಲವು ವಿಭಾಗಗಳಲ್ಲಿ ಈ ಸಿನಿಮಾ ಹಳೆಯ ರೆಕಾರ್ಡ್ಗಳನ್ನೆಲ್ಲಾ ಮುರಿದು ಹಾಕಿದೆ ಎಂದಿದ್ದಾರೆ.
ಅಲ್ಲದೇ ಸಿನಿಮಾ ಮೊದಲ ದಿನ 30 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದನ್ನು ಸ್ಪಷ್ಟಪಡಿಸಿದ್ದಾರೆ.. ಅಲ್ಲದೇ ಒಂದು ವಾರದ ಒಳಗಾಗಿ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರಲಿದೆ ಎಂದಿದ್ದಾರೆ. ಅಲ್ಲದೆ, ಸಿನಿಮಾದ ಡಿಜಿಟಲ್, ಸ್ಯಾಟಲೈಟ್, ಒಟಿಟಿ ಹಾಗೂ ಸಿನಿಮಾದ ಒಟ್ಟಾರೆ ಗ್ರಾಸ್ ಕಲೆಕ್ಷನ್ ಲೆಕ್ಕ ಹಾಕಿದರೆ ಸಿನಿಮಾ ಈಗಾಗಲೇ ನೂರು ಕೋಟಿಗೂ ಹೆಚ್ಚು ಹಣವನ್ನು ಕಲೆಕ್ಷನ್ ಮಾಡಿ ಆಗಿದೆ ಎಂದಿದ್ದಾರೆ.
ವಿಶ್ವಾದ್ಯಂತ ಸುಮಾರು 4000 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಜೇಮ್ಸ್ ತೆರೆಕಂಡಿದೆ.. ವಿಶ್ವಾದ್ಯಂತ ಮೊದಲ ದಿನವೇ ಜೇಮ್ಸ್ ದಾಖಲೆಯ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.. ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಬೆಂಗಳೂರಿನಲ್ಲಿ ಮುಂದಿನ ಒಂದು ವಾರದ ವರೆಗಿನ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಅಗಿದೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಹರಿದಾಡುತ್ತಿವೆ.