ಸೋಷಿಯಲ್ ಮೀಡಿಯಾ ಸ್ಟಾರ್ ಡಾಲಿ ಡಿ ಕ್ರೂಜ್ ಕಾರು ಅಪಘಾತದಲ್ಲಿ ನಿಧನ
ದಕ್ಷಿಣ ಭಾರತದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದ ನಟಿ ಡಾಲಿ ಡಿ ಕ್ರೂಜ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು , ಅವರ ಅಭಿಮಾನಿಗಳಿಗೆ ಆಘಾತವಾಗಿದೆ.
ಗಾಯತ್ರಿ ಎಂದೇ ಖ್ಯಾತಿ ಪಡೆದಿದ್ದ ಡಾಲಿ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದರು..
ಈ ಅಪಘಾತದಲ್ಲಿ ಗಾಯತ್ರಿ ಮಾತ್ರವಲ್ಲ ಕಾರಿನಲ್ಲಿದ್ದ ರಾಥೋಡ್ ಎಂಬಾತರು ಮತ್ತು ಮಹಿಳೆಯೊಬ್ಬರು ಕೂಡ ಸಾವನ್ನಪ್ಪಿದ್ದಾರೆ. ಹೆಚ್ಚು ವೇಗದಲ್ಲಿ ಬಂದ ಕಾರಣವೇ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ.