ಕರ್ನಾಟಕದಲ್ಲಿ ಮಾತ್ರವೇ ಜೇಮ್ಸ್ ಜಾತ್ರೆಯಿಲ್ಲ , ಬೇರೆ ರಾಜ್ಯಗಳು ಅಷ್ಟೇ ಯಾಕೆ ಬೇರೆ ದೇಶಗಳಲ್ಲು ಅಪ್ಪು ಜಾತ್ರೆ ನಡೆದಿದೆ.. ಅಮೆರಿಕದಲ್ಲಿರುವ ಅಪ್ಪು ಅಭಿಮಾನಿಗಳು ಅಪ್ಪು ನೆನಪಿನಲ್ಲಿ ಕಾರ್ ಜಾಥಾ ನಡೆಸಿದ್ದಾರೆ.
ಜೇಮ್ಸ್ ಪ್ರಸ್ತುತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ವಿದೇಶಗಳಲ್ಲಿಯೂ ಜೇಮ್ಸ್ ತೆರೆ ಕಂಡಿದ್ದು, ಅಲ್ಲಿಯೂ ಅಪ್ಪು ಅಭಿಮಾನಿಗಳು ಅಪ್ಪುನನ್ನ ಕಣ್ತುಂಬಿಕೊಳ್ತಿದ್ದಾರೆ. ಈ ನಡುವೆ ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ಕನ್ನಡಿಗರು ವೀಕೆಂಡ್ನಲ್ಲಿ ಕುಟುಂಬ ಸಮೇತ ಕಾರ್ ಪರೇಡ್ ಮಾಡಿ ಸಂಭ್ರಮಿಸಿದ್ದಾರೆ. ಕಾರಿನ ಮೇಲೆ ಅಪ್ಪು ಫೋಟೋ ಮತ್ತು ಬ್ಯಾನರ್ಗಳನ್ನು ಹಾಕುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.
ಕೆನಾಡದಲ್ಲೂ ಜೇಮ್ಸ್ ರಿಲೀಸ್ ಆಗಿದ್ದು ಅಪ್ಪು ಪೋಸ್ಟರ್ಗೆ ಅಭಿಮಾನಿಗಳು ಹೂಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಜೇಮ್ಸ್ ಸ್ವಾಗತಿಸಿ , ಅಪ್ಪುಗೆ ನಮನ ಸಲ್ಲಿಸಿದ್ಧಾರೆ..