Tulu films : ‘ಮಗನೇ ಮಹಿಷ’ ಆಡಿಯೋ ಲಾಂಚ್..!!
ಮಂಗಳೂರು : ತುಳು ಸೂಪರ್ ಹಿಟ್ ಸಿನಿಮಾ ಚಾಲಿಪೋಲಿಲು ನಿರ್ದೇಶಿಸಿದ್ದ ನಿರ್ದೇಶಕ ವೀರೇಂದ್ರ ಶೆಟ್ಟಿ ಅವರು ಇದೀಗ ಮಗನೇ ಮಹಿಷ ಸಿನಿಮಾಗೆ ಡೈರೆಕ್ಷನ್ ಮಾಡುವ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ..
ಈ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವು ಮಂಗಳೂರಿನಲ್ಲಿ ನೆರವೇರಿತು.. ವಿಶೇಷ ಎಂದ್ರೆ ಈ ಸಿನಿಮಾದ ಮೂಲಕ ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕರಾದ ಮನೋಮೂರ್ತಿ ಅವರು ತುಳು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ..
ಕಾರ್ಯಕ್ರಮದಲ್ಲಿ ಮನೋಮೂರ್ತಿ , ದೇವದಾಸ್ ಕಾಪಿಕಾಡ್ , ನವೀನ್ ಡಿ ಪಡೀಲ್ , ಭೋಜರಾಜ್ ವಾಮಂಜೂರ್ , ವಿಜಯ್ ಕುಮಾರ್ ಕೊಡಿಯಾಲ್ ಬೈಲ್ , ದಿನೇಶ್ ಕೊಡಪದವು ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು..