Malayalam | ನಟ ಸುರೇಶ್ ಗೋಪಿ ಅವರ ಸಹೋದರ ಅರೆಸ್ಟ್
ಕೇರಳ : ಭೂ ಹಗರಣ ಪ್ರಕರಣದಲ್ಲಿ ಖ್ಯಾತ ಮಲಯಾಳಂ ನಟ ಸುರೇಶ್ ಗೋಪಿ ಅವರ ಸಹೋದರ ಸುನೀಲ್ ಗೋಪಿ ಅವರನ್ನ ಕೊಯಮತ್ತೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸುನೀಲ್ ಗೋಪಿ ಅವರು ಕೊಯಮತ್ತೂರಿನ ನವಕರೈ ಪ್ರದೇಶದಲ್ಲಿ ಮಯಿಲ್ ಸಾಮಿ ಎಂಬುವವರಿಗೆ ಸೇರಿದ 4.52 ಎಕರೆ ಭೂಮಿಯನ್ನು ಖರೀದಿಸಿದ್ದರು.
ಆದರೆ, ಬಾಂಡ್ ನೋಂದಣಿ ಅಸಿಂಧು ಎಂದು ನ್ಯಾಯಾಲಯವು ಘೋಷಿಸಿತ್ತು.
ಸುನೀಲ್ ನ್ಯಾಯಾಲಯದ ಆದೇಶವನ್ನು ಮರೆಮಾಡಿ ಕೊಯಮತ್ತೂರಿನ ಜಿ ಎನ್ ಮಿಲ್ಸ್ ಪ್ರದೇಶದ ಗಿರಿಧರನ್ ಅವರಿಗೆ ಭೂಮಿಯನ್ನು ಮಾರಾಟ ಮಾಡಿದ್ದರು.
ಹೀಗಾಗಿ ಗಿರಿಧರನ್ ಅವರು ಸುನೀಲ್ ವಿರುದ್ಧ ಕೊಯಮತ್ತೂರು ಜಿಲ್ಲಾ ಅಪರಾಧ ವಿಭಾಗಕ್ಕೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಕೊಯಮತ್ತೂರು ಕ್ರೈಂ ಬ್ರಾಂಚ್ ಪೊಲೀಸರು ಸುನೀಲ್ ಅವರನ್ನ ವಶಕ್ಕೆ ಪೆಡದು ಕಸ್ಟಡಿಗೆ ಪಡೆದಿದ್ದಾರೆ. actor-suresh-gopi-brother-sunil-gopi-got-arrested