Vishal | ಚುನಾವಣೆಯಲ್ಲಿ ವಿಶಾಲ್ ತಂಡಕ್ಕೆ ಭಾರಿ ಅಂತರದ ಗೆಲುವು
ದಕ್ಷಿಣ ಭಾರತೀಯ ಸಿನಿ ನಟರ ಸಂಘ (ನಡಿಗರ್ ಸಂಘ) ಚುನಾವಣೆಯಲ್ಲಿ ನಟ ವಿಶಾಲ್ ತಂಡ ಜಯಭೇರಿ ಬಾರಿಸಿದೆ.
ಕಳೆದ 2019 ಜೂನ್ 23ರಂದು ನಡಿಗರ್ ಸಂಘಕ್ಕೆ ಚುನಾವಣೆ ನಡೆದಿತ್ತು.
ಪಾಂಡವರ್ ತಂಡದ ಹೆಸರಲ್ಲಿ ನಾಜರ್ ಅಧ್ಯಕ್ಷರಾಗಿ ವಿಶಾಲ್ ತಂಡ,ಶಂಕರ್ ದಾಸ್ ಹೆಸರಲ್ಲಿ ಭಾಗ್ಯರಾಜ್ ಅಧ್ಯಕ್ಷರಾಗಿ ಐಸರಿ ಗಣೇಶ್ ತಂಡ ಸ್ಪರ್ಧಿಸಿದ್ದವು.
ಆದರೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚುನಾವಣೆ ರದ್ದುಗೊಳಿಸುವಂತೆ ಕೋರಿ ಐಸಿರಿ ಗಣೇಶ್ ತಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಇತ್ತೀಚೆಗಷ್ಟೇ ನ್ಯಾಯಾಲಯ ಚುನಾವಣೆ ಕಾನೂನುಬದ್ಧ ಎಂದು ತೀರ್ಪು ನೀಡಿ ಮತ ಎಣಿಕೆಗೆ ಆದೇಶಿಸಿತ್ತು.
ಭಾನುವಾರ ಬೆಳಗ್ಗೆ ನುಂಗಂಬಾಕ್ಕಂನ ಖಾಸಗಿ ಶಾಲೆಯೊಂದರಲ್ಲಿ ನಿವೃತ್ತ ನ್ಯಾಯಾಧೀಶ ಪದ್ಮನಾಭನ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಮತ ಎಣಿಕೆ ನಡೆಸಿತು.
ಅಂಚೆ ಮತಗಳಲ್ಲಿ ವಿಶಾಲ್ ತಂಡ ಭಾರಿ ಅಂತರದಿಂದ ಮುನ್ನಡೆ ಪಡೆದುಕೊಂಡಿತ್ತು.
ಮತ ಎಣಿಕೆ ವೇಳೆಯಲ್ಲೂ ಕೆಲವೊಂದು ವಾದ ವಿವಾದಗಳು ನಡೆದವು.
ಅಂತಿಮವಾಗಿ ವಿಶಾಲ್ ತಂಡ ಭಾರಿ ಬಹುಮತದೊಂದಿಗೆ ಜಯಭೇರಿ ಬಾರಿಸಿತು. Nadigar-sangam-elections vishal-led-pandavar-ani-wins