Toofan Lyrical Song | ಮುನ್ನೂಗ್ಗೋ ಸಿಡಿಲ ಕಿಚ್ಚಿವನೇ | ತೂಫಾನ್ ಸಾಂಗ್ ರಿವ್ಯೂ..!!
ಜರಡಿ ಹಿಡಿದು ನಿಂತರೆ ಒಬ್ರು ಇರಲ್ಲ. ಇಂತ ಧೈರ್ಯ ಇಲ್ದೆ ಇರೋ ಜನರನ್ನ ಹಿಡ್ಕೊಂಡು ಇವ್ನೇನ್ ಮಾಡ್ತಾನೆ.
ಹೌದು..! ಸರ್ ನೀವೇಳ್ದಾಗೆ ನಮ್ಗೆ ಧೈರ್ಯ ಇರ್ಲಿಲ್ಲ. ಶಕ್ತಿ ಇರರ್ಲಿಲ್ಲ. ನಮ್ಕೆ ಇರ್ಲಿಲ್ಲ. ಸಾವ್ ನಮ್ ಮೇಲ್ ಕುಣ್ ದಾಡ್ತಾ ಇತ್ತು.
ಆದ್ರೆ ಒಬ್ಬ ಅಡ್ಡ ನಿಂತ ಅಂತಾ ಅವ್ನ ಮಾರಿ ಮುಂದೆ ಕತ್ ಎಗರ್ಸಿದ್ನಲ್ಲಾ, ಆವತ್ತು ತುಂಬಾ ವರ್ಷಗಳಾದ್ಮೇಲೆ, ಸಾವ್ ಗೆ ನಾವು ಕುಣಿದಾಡ್ವಿ..
ಅವ್ನು ಕತ್ತಿ ಬೀಸಿದ್ ರಭಸಕ್ಕೆ, ಒಂದ್ ಗಾಳಿ ಹುಟ್ಕೊತು ಸಾರ್. ಆ ಗಾಳಿ ನರಾಚಿಯಲ್ಲಿರೋ ಪ್ರತಿ ಒಬ್ರಿಗೂ ಉಸಿರ್ ಕೊಟ್ಬಿಡ್ತೂ..
ನಿಮ್ಗೆ ಸಲಹೆ ಕೊಡ್ತೀನಿ, ನೀವ್ ಮಾತ್ರ ಅವ್ನಗೆ ಅಡ್ಡ ನಿಲ್ಲೋಕೆ ಹೋಗಬೇಡಿ ಸಾರ್..!!!! ಹೀಗೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ತೂಫಾನ್ ಸಾಂಗ್ ಶುರುವಾಗುತ್ತೆ.
ತು ಕ್ಯಾ ಮೇ ಕ್ಯಾ ಹಟ್ ಜಾ ಹಟ್ ಜಾ.. ತೂಫಾನ್ ಅನ್ನೋ ಸಾಹಿತ್ಯ ಮೊದಲ ಕೆಜಿಎಫ್ ಸಿನಿಮಾದ ಸಲಾಂ ರಾಕಿಭಾಯ್ ಹಾಡನ್ನ ನೆನಪಿಸುತ್ತಿದೆ.
ಇದು ಚಾಪ್ಟರ್ 2 ಸಿನಿಮಾದ ಹೀರೋ ಇಂಟ್ರಡಕ್ಷನ್ ಸಾಂಗ್ ಅನ್ನೋದು ಕ್ಲಿಯರ್ ಆಗಿದೆ.
ಇದು ಹೀರೋ ಇಂಟ್ರಡಕ್ಷನ್ ಸಾಂಗ್ ಅನ್ನೋದು ಕ್ಲಿಯರ್ ಆಗಿದೆ.
ಇಲ್ಲಿಯವರೆಗೂ ಹಾಡಿನಲ್ಲಿ ಕೇವಲ ಹಿಂದಿ ಪದಗಳೇ ಕೇಳಿಬರುತ್ತೆ. ಇದಾದ ಬಳಿಕ ತೊಡೆತಟ್ಟಿ ನಿಂತ ಬಡಿ ಗಟ್ಟಿಗನೇ.. ಮುನ್ನೂಗ್ಗೋ ಸಿಡಿಲ ಕಿಚ್ಚಿವನೇ…ಅನ್ನೋ ಸಾಹಿತ್ಯ ಬೊಂಬಾಟಾಗಿದೆ.
ಇನ್ನು ಈ ಹಾಡಿನ ಮಧ್ಯೆ ನರಾಚಿನ್ನ ವಶಕ್ಕೆ ಪಡೆಯೋ ರಾಕಿಭಾಯ್ ಅಲ್ಲಿನ ಜನರಿಗಾಗಿ ಮಾಡುವ ಕೆಲಸಗಳು, ಹಾಗೆ ಅಲ್ಲಿನ ಜನರ ಪರ ರಾಖಿ ಹೇಗೆ ನಿಲ್ತಾನೆ..
ನಿರಾಚಿಯನ್ನ ರಾಖಿ ಹೇಗೆ ಆವರಿಸಿಕೊಳ್ತಾನೆ ಅನ್ನೋದನ್ನ ತೋರಿಸಲಾಗಿದೆ.
ಜೊತೆಗೆ ರಾಖಿ ಭಾಯ್ ಅಲ್ಲಿನ ಜನರೊಂದಿಗೆ ಸೇರ್ಕೊಂಡು ಹೇಗೆ ಹೊಸ ನರಾಚಿಯನ್ನ ಕಟ್ತಾನೆ ಅನ್ನೋದು ಕೂಡ ಅಲ್ಲಿ ತೋರಿಸಲಾಗಿದೆ.
ಮುಖ್ಯವಾಗಿ ಕೆಲವೊಂದು ಸೀನ್ ಗಳಲ್ಲಿ ಅಲ್ಲಿನ ಮಕ್ಕಳು ಹೀರೋಯಿನ್ ರೀನಾ ಗೆ ರಾಖಿಭಾಯ್ ಗರುಡನನ್ನ ಸಂಹಾರ ಮಾಡಿದ್ದೇಗೆ..? ಅಲ್ಲಿನ ಜನರಿಗೆ ರಾಖಿಭಾಯ್ ಹೇಗೆ ನೆರವಾದ ಅನ್ನೋದನ್ನ ರಿ ಕ್ರಿಯೇಟ್ ಮಾಡಿ ತೋರಿಸಿದಂತೆ ಇದೆ.
ಒಟ್ಟಾರೆ ಕೆಜಿಎಫ್ ತೂಫಾನ್ ಸಾಂಗ್ ದೊಡ್ಡ ಡ್ರಂಗಳ ಸದ್ದಿನೊಂದಿಗೆ ಕೇಳೋಕೆ ಇಷ್ಟ ಆದ್ರೂ ಲಿರಿಕ್ಸ್ ಬೇಗ ಅರ್ಥ ಆಗ್ತಿಲ್ಲ.
ಜೊತೆಗೆ ಹಳೆ ಎಣ್ಣೆ ಹೊಸ ಬಾಟಲ್ ನಂತೆ ಮ್ಯೂಸಿಕ್ ಡೈರೆಕ್ಟರ್ ರವಿಬಸ್ರೂರ್ ಅವರು ಹಾಡನ್ನ ಕಂಪೋಸ್ ಮಾಡಿದ್ದಾರೆ ಅನಿಸ್ತಿದೆ.
ಹಾಡಿನ ಸಾಹಿತ್ಯ ಹೊಸದು ಅನ್ನೋದನ್ನ ಬಿಟ್ರೆ ಸಂಗೀತದಲ್ಲಿ ಹೆಚ್ಚೇನು ಬದಲಾವಣೆ ಕಾಣಿಸ್ತಿಲ್ಲ. ಆದ್ರೆ ಹಾಡು ಕೇಳೋಕೆ ಮಜಾ ಕೊಡ್ತಿದೆ. ಒಳ್ಳೆ ಕಿಕ್ ಕೊಡ್ತೀದೆ.
Toofan KGF Chapter 2 Song review