Avatar 2 : ಟೀಸರ್ ರಿಲೀಸ್ ಡೇಟ್ ಅನೌನ್ಸ್..!!
ಇಡೀ ವಿಶ್ವವೇ ಕಾಯುತ್ತಿರುವ ಮೋಸ್ಟ್ ಆಂಟಿಸಿಪೇಟೆಡ್ ಹಿಸ್ಟರಿ ಕ್ರಿಯೇಟರ್ 3D ಸಿನಿಮಾ Avatar 2 …. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಭಿಮಾನಿಗಳು ಇಡೀ ವಿಶ್ವಾದ್ಯಂತ ಕಾತರದಿಂದ ಕಾಯ್ತಾಯಿದ್ದಾರೆ.. ಅವತಾರ್ ಭಾಗ ಒಂದು ರಿಲೀಸ್ ಆದ ಬರೋಬ್ಬರಿ 11 ವರ್ಷಗಳ ನಂತರ ಅವತಾರ್ ರಿಲೀಸ್ ಆಗ್ತಿದೆ.. ಅವತಾರ್ 2 ಸಿನಿಮಾ ರಿಲೀಸ್ ಡೇಟ್ ಈ ಹಿಂದೆಯೇ ಅನೌನ್ಸ್ ಆಗಿತ್ತು.. ಇದೀಗ ‘ಅವತಾರ್ 2’ ಟೀಸರ್ ಬಿಡುಗಡೆಗೆ ದಿನಾಂಕ ಪ್ರಕಟವಾಗಿದೆ..
2009 ರಲ್ಲಿ ಬಿಡುಗಡೆ ಆಗಿದ್ದ ಅವತಾರ್ ಸಿನಿಮಾ ಜನರನ್ನ ಮಂತ್ರಮುಗ್ಧಗೊಳಿಸಿತ್ತು.. ಈ ಸಿನಿಮಾದ ಸೀಕ್ವೆಲ್ ಬರೋದಕ್ಕೆ 11 ವರ್ಷಗಳೇ ಬೇಕಾಯ್ತು.. ಅವತಾರ್ 2ಗೆ ವಿಶ್ವಾದ್ಯಂತ ಅದ್ರಲ್ಲೂ ಭಾರತದಲ್ಲಿ ದೊಡ್ಡ ಮಟ್ಟದ ಕ್ರೇಜ್ ಇದೆ..
ಮೇ 06 ರಂದು ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ‘ಅವತಾರ್ 2’ ಸಿನಿಮಾದ ಟೀಸರ್ ಅನ್ನು ಮಾರ್ವೆಲ್ ಸಿನಿಮಾಸ್ನ ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾ ಸರಣಿಯ ಹೊಸ ಸಿನಿಮಾದ ಜೊತೆಗೆ ಬಿಡುಗಡೆ ಮಾಡಲಾಗುತ್ತಿರುವುದು ವಿಶೇಷ.
ಅವತಾರ್ 2 ಸಿನಿಮಾವನ್ನು ಸಿನಿಮಾದ ನಿರ್ದೇಶಕರೂ ಆಗಿರುವ ಜೇಮ್ಸ್ ಕ್ಯಾಮರೂನ್ ನಿರ್ಮಾಣ ಮಾಡಿದ್ದಾರೆ. ಇವರ ಜೊತೆಗೆ ಟೈಟಾನಿಕ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಜೇಮ್ಸ್ ಲಾಂಡೌ ಸಹ ಇದ್ದಾರೆ. ಸಿನಿಮಾವನ್ನು ಲೈಟ್ ಸ್ಟ್ರಾಮ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿದೆ..
ನ್ಯೂಜಿಲೆಂಡ್ನಲ್ಲಿ 2ನೇ ಭಾಗದ ಶೂಟಿಂಗ್ ನಡೆಯುತ್ತಿದೆ. ಇನ್ನೂ ಈವರೆಗೂ 2ನೇ ಭಾಗವೇ ರಿಲೀಸ್ ಆಗಿಲ್ಲ. ಅದಾಗಲೇ 3ನೇ ಭಾಗದ ಬಿಡುಗಡೆಯ ಬಗ್ಗೆ ಮಾಹಿತಿ ಸಿಕ್ಕಿದೆ. ಅವತಾರ್ ಸರಣಿಯ ಒಟ್ಟು ಐದು ಸಿನಿಮಾಗಳು ತಯಾರಾಗಲಿವೆ. ಈಗ ಅವತಾರ್ 2 ಮತ್ತು ಅವತಾರ್ 3 ತಯಾರಾಗುತ್ತಿದೆ. ನಂತರ ಅವತಾರ್ 4 ಮತ್ತು ಅವತಾರ್ 5 ಚಿತ್ರೀಕರಣ ಪ್ರಾರಂಭವಾಗಲಿದೆ. ಅವತಾರ್ 4 ಡಿಸೆಂಬರ್ 18, 2026 ಕ್ಕೆ ಬಿಡುಗಡೆ ಆಗಲಿದೆ. ಅವತಾರ್ 5 ಡಿಸೆಂಬರ್ 22, 2028 ಕ್ಕೆ ಬಿಡುಗಡೆ ಆಗಲಿದೆ.