KGF 2 : ತೂಫಾನ್ VS Beast…!!! ರೋಚಕ ಫೈಟ್ ನಲ್ಲಿ ಯಾರಿಗೆ ಜಯ..!!
ಭಾರತದಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿರೋ ಸಿನಿಮಾ KGF 2… ರಾಕಿ ಭಾಯ್ ತೂಫಾನಿ ಎಂಟ್ರಿಗಾಗಿ ಫ್ಯಾನ್ಸ್ ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.. ಈ ನಡುವೆ ಮತ್ತೊಂದು ಹೈಲೀ ಆಂಟಿಸಿಪೇಟೆಡ್ ಬೀಸ್ಟ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿ , ಬಾಕ್ಸ್ ಆಫೀಸ್ ರೆಕಾರ್ಡ್ ಮಾಡುವ ಕೆಜಿಎಫ್ 2 ಸಿನಿಮಾ ಪ್ಲಾನ್ ಗೆ ಅಡಚಣೆ ಉಂಟು ಮಾಡಿದೆ.. ಏಪ್ರಿಲ್ನಲ್ಲಿ 14 ಕ್ಕೆ KGF 2 ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಮುಂದೆ ನಿಲ್ಲೋ ಧೈರ್ಯ ಯಾವ ಸಿನಿಮಾಗಳಿಗೂ ಇಲ್ಲ.. ಆದ್ರೆ ರಾಕಿಗೆ ಟಕ್ಕರ್ ಕೊಡೋಕೆ ದಳಪತಿ ಸಜ್ಜಾಗಿದ್ದಾರೆ..
ಹೌದು…. ಏಪ್ರಿಲ್ 13 ಕ್ಕೆ ಬೀಸ್ಟ್ ಸಿನಿಮಾ ರಿಲೀಸ್ ಆಗ್ತಿದೆ.. ತಮಿಳು ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಬೀಸ್ಟ್ ರಿಲೀಸ್ ಆದ ಮಾರನೇ ದಿನವೇ ಕೆಜಿಎಫ್ ಸಿನಿಮಾ ರಿಲೀಸ್ ಆಗಲಿದೆ.. ಆದರೆ ಈ ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿದ್ದು, ಏಪ್ರಿಲ್ ನಲ್ಲಿ ರಿಲೀಸ್ ಆಗಲಿವೆ. ಎರಡೂ ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದರೆ ಕಲೆಕ್ಷನ್ ಮೇಲೆ ಹೊಡೆತ ಬೀಳುವುದು ಖಚಿತ.
ವಿಜಯ್ ಅಭಿನಯದ ಬೀಸ್ಟ್ ಕೂಡ ಸಾಕಷ್ಟು ನಿರೀಕ್ಷೆ ಹೊಂದಿರುವ ಸಿನಿಮಾವಾಗಿದೆ.. ಇತ್ತ ಕೆಜಜಿಎಫ್ ಹವಾ ಬಗ್ಗೆ ಹೇಳೋದೆ ಬೇಡ.. ಹೀಗಾಗಗಿ ಬಾಕ್ಸ್ ಆಫೀಸ್ ನಲ್ಲಿ ಯಾವ ಸಿನಿಮಾ ದೊಡ್ಡ ಮಟ್ಟದಲ್ಲಿ ರೆಕಾರ್ಡ್ ಮಾಡುತ್ತದೆ ಅನ್ನೋದನ್ನ ಕಾದು ನೋಡ್ಬೇಕಿದೆ..
KGF 2 VS Beast