Madhuri Dixit : ಅರಮನೆಯಂತಿದೆ ಮಾಧುರಿ ಧೀಕ್ಷಿತ್ ಬಂಗಲೆ..!!
ಬಾಲಿವುಡ್ ನ ಡ್ಯಾನ್ಸಿಂಗ್ ಕ್ವೀನ್ , ಅದಾವೋಂಕಿ ರಾಣಿ , ಎಕ್ಸ್ ಪ್ರೆಶನ್ ಕ್ವೀನ್ , ಮಾಧುರಿ ಧೀಕ್ಷಿತ್ ಬಗ್ಗೆ ಗೊತತ್ತಿಲ್ಲದ ಭಾರತೀಯರು ತೀರಾ ಕಡಿಮೆ… ಅನೇಕರಿಗೆ ಸೆಲೆಬ್ರಿಟಿಗಳ ಲೈಫ್ ಸ್ಟೈಲ್ , ಅವರ ಮನೆ ಹೇಗಿದೆ ಅಂತ ತಿಳಿಯೋ ಕ್ಯೂರಿಯಾಸಿಟಿ ಇರುತ್ತೆ.. ಎಷ್ಟೋ ಸೆಲೆಬ್ರಿಟಿಗಳು ಅದ್ರಲ್ಲೂ ಮುಂಬೈನಲ್ಲಿ ಬಾಲಿವುಡ್ ಸ್ಟಾರ್ ಗಳು ತಮ್ಮ ಕನಸಿನ ಮನೆಗಳಲ್ಲಿ ವಾಸಿಸುತ್ತಿದ್ದಾರೆ.. ಅಂತವರ ಪೈಕಿ ಒಬ್ಬರು ಮಾಧುರಿ ದೀಕ್ಷಿತ್…!!
ನಟಿ ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ ಶ್ರೀರಾಮ್ ನೆನೆ ಮುಂಬೈನಲ್ಲಿ ಹೊಸ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಮುಂಬೈನ ಐಷಾರಾಮಿ ಪ್ರದೇಶವಾದ ವರ್ಲಿಯ ಬಹುಮಹಡಿ ಕಟ್ಟಡದಲ್ಲಿ ಈ ಮನೆ ಇದೆ. ಮಾಧುರಿ ದೀಕ್ಷಿತ್ ಅವರ ಹೊಸ ಮನೆ 29 ನೇ ಮಹಡಿಯಲ್ಲಿದೆ. 5500 ಚದರ ಅಡಿಗಳಷ್ಟು ಜಾಗ ಹೊಂದಿರುವ ಅಪಾರ್ಟ್ಮೆಂಟ್ ನ ಬಾಡಿಗೆ ತಿಂಗಳಿಗೆ 12.5 ಲಕ್ಷ ರೂ ಇದೆ.
ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಮನೆಯನ್ನು ವಿನ್ಯಾಸಗೊಳಿಸಿದ ಅಪೂರ್ವ ಶ್ರಾಫ್, ಅವರು ಮಾಧುರಿ ಮತ್ತು ಶ್ರೀರಾಮ್ ಅವರನ್ನ ಹೊಗಳಿದ್ದಾರೆ. “ಪ್ರಾಮಾಣಿಕವಾಗಿ, ಅವರು ತುಂಬಾ ಡೌನ್ ಟು ಅರ್ಥ್ ಮತ್ತು ಅವರ ವಿನಂತಿಗಳು ಎಷ್ಟು ಪ್ರಾಯೋಗಿಕವಾಗಿವೆ ಎಂದು ನನಗೆ ಆಶ್ಚರ್ಯವಾಯಿತು. ಎಂದು ವಿನ್ಯಾಸಕಿ ಅಪೂರ್ವಾ ಶ್ರಾಫ್ ಹೇಳಿದ್ದಾರೆ.