ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ನಯನತಾರಾ ವಿರುದ್ಧ ದೂರೊಂದು ದಾಖಲಾಗಿದೆ.. ನಯನತಾರಾ ಅಷ್ಟಟೇಎ ಅಲ್ಲ ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ಅವರಿಗೂ ಸಂಕಷ್ಟ ಎದುರಾಗಿದೆ.. ಅಷ್ಟಕ್ಕೂ ಈ ಜೋಡಿಯ ಮೇಲೆ ಮೇಲೆ ಯಾವ ಕಾರಣಕ್ಕೆ ಆವ ಆರೋಪದಡಿ ದೂರು ದಾಖಲಾಗಿದೆ ಅಂತ ನೋಡೋದಾದ್ರೆ , ಇವರು ರೌಡಿಗಳಿಗೆ ಉತ್ತೇಜಿಸುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ..
ನಯನತಾರಾ ಮತ್ತು ವಿಘ್ವೇಶ್ ಶಿವನ್ ಸದ್ಯದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯಿದೆ. ಇಬ್ಬರೂ ಈಗಾಗಲೇ ಎರಡು ವರ್ಷದಿಂದ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಪ್ರೀತಿಯ ನೆನಪಾಗಾಗಿ ಅವರು ‘ರೌಡಿ ಪಿಕ್ಚರ್ಸ್’ ಸಂಸ್ಥೆಯನ್ನು ಶುರು ಮಾಡಿದ್ದರು. ಈ ಸಂಸ್ಥೆಯಿಂದ ಭೂಗತ ಜಗತ್ತಿನ ಕಥೆಗಳನ್ನೇ ಸಿನಿಮಾ ಮಾಡುತ್ತಿದ್ದಾರೆ ಎಂದು ದೂರುದಾರರು ಆರೋಪ ಮಾಡಿದ್ದಾರೆ. ಇವರ ಚಿತ್ರಗಳಿಂದಾಗಿ ರೌಡಿಗಳಿಗೆ ಮತ್ತಷ್ಟು ಉತ್ತೇಜನ ಸಿಗುತ್ತಿದೆ ಎಂದೂ ದೂರಲಾಗಿದೆ.
ರೌಡಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದ ಬಹುತೇಕ ಸಿನಿಮಾಗಳು ರೌಡಿಸಂ ಹಿನ್ನೆಲೆಯ ಕಥೆಯನ್ನೇ ಒಳಗೊಂಡಿವೆ. ಅಲ್ಲದೇ ವಿಘ್ನೇಶ್ ಶಿವನ್ ನಿರ್ದೇಶನದ, ವಿಜಯ್ ಸೇತುಪತಿ ನಟನೆಯ ‘ರೌಡಿಧಂ’ ಸಿನಿಮಾ ಕೂಡ ಅಂಥದ್ದೇ ಕಥೆಯನ್ನು ಹೊಂದಿತ್ತು. ಈ ಸಿನಿಮಾದಲ್ಲಿ ನಯನತಾರಾ ಕೂಡ ನಟಿಸಿದ್ದರು. ಇದೀಗ ಈ ಜೋಡಿ ಸಂಕಷ್ಟಕ್ಕೆ ಸಿಲುಕಿದೆ..