Sandalwood : Kannada serials : ನಟಿ ತೇಜಸ್ವಿನಿ ಮದುವೆ ಸಂಭ್ರಮ…!!!
ಚಂದನವನದದಲ್ಲಿ ಹೆಸರು ಮಾಡಿ ನಂತರ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ತೇಜಸ್ವಿನಿ ಪ್ರಕಾಶ್ ಗೆ ಅವರದ್ದೇ ಆದ.. ಅಭಿಮಾನಿಗಳಬಳಗವಿದದೆ.. ನನ್ನರಸಿ ರಾಧೆ ಧಾರಾವಾಹಿಯಲ್ಲಿ ತೇಜಸ್ವಿನಿ ಖ್ಯಾತಿ ಪಡೆದಿದ್ದಾರೆ.. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಂದ್ಹಾಗೆ ಅರಿಶಿಣ ಶಾಸ್ತ್ರವನ್ನು ಅದ್ಧೂರಿಯಾಗಿ ಮಾಡಲಾಗಿದ್ದು , ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಕುಟುಂಬಸ್ಥರು, ಸಿನಿಮಾರಂಗದ ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಹಳದಿ ಶಾಸ್ತ್ರ ನೆರವೇರಿದೆ..
https://www.instagram.com/reel/CbT0FTLjjag/?utm_source=ig_web_copy_link
ಮದುವೆ ಶಾಸ್ತ್ರ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಭಿಮಾನಿಗಳು ತೇಜಸ್ವಿನಿಗೆ ಶುಭ ಕೋರುತ್ತಿದ್ದಾರೆ. ಅಂದ್ಹಾಗೆ ತೇಜಸ್ವಿನಿ ತಮ್ಮ ಬಾಲ್ಯದ ಗೆಳಯನಾದ ಫಣಿ ವರ್ಮ ಜೊತೆ ವಿವಾಹವಾಗಿದ್ದಾರೆ. ಅರಿಶಿಣ ಶಾಸ್ತ್ರದಲ್ಲಿ ಸ್ಯಾಂಡಲ್ವುಡ್ ನಟಿ ಕಾರುಣ್ಯ ರಾಮ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
2008ರಲ್ಲಿ ತೆರೆಕಂಡ ದರ್ಶನ್ ಅಭಿನಯದ ಗಜ ಚಿತ್ರದ ಪಾತ್ರವೊಂದರಲ್ಲಿ ತೇಜಸ್ವಿನಿ ಕಾಣಿಸಿಕೊಂಡಿದ್ದರು. 2016ರಿಂದ 2017ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ನಿಹಾರಿಕಾ ಧಾರವಾಹಿಯಲ್ಲಿ ನಾಯಕಿಯಾಗಿದ್ದರು.. ನಂತರ ಬಿಗ್ ಸ್ಕ್ರೀನ್ ಮೇಲೆ ಹೆಚ್ಚಾಗಿ ಕಾಣಿಸಿಕೊಂಡ ನಟಿ ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ… ತೆಲುಗಿನಲ್ಲೂ ಗುರುತಿಸಿಕೊಂಡಿರೋ ತೇಜಸ್ವಿನಿ 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2017ರಲ್ಲಿ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರಲ್ಲಿ ತೇಜಸ್ವಿನಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.