Dhanush : ಮೊದಲ ಬಾರಿಗೆ ಮಕ್ಕಳ ಜೊತೆ ಕಾಣಿಸಿಕೊಂಡ ಧನುಷ್..!!
ತಮಿಳಿನ ಸ್ಟಾರ್ ನಟ ಧನುಷ್ ಅವರು ಡಿವೋರ್ಸ್ ನಂತರ ವೃತ್ತಿ ಜೀವನದಲ್ಲೇ ಬ್ಯುಸಿಯಾಗಿದ್ದಾರೆ.. ಇತ್ತೀಚೆಗೆ ಡೈರೆಕ್ಷನ್ ಗೆ ಕಮ್ ಬ್ಯಾಕ್ ಮಾಡಿರುವ ತಮ್ಮ ಮಾಜಿ ಪತ್ನಿ ಐಶ್ವರ್ಯಾ ( ರಜನಿಕಾಂತ್ ಪುತ್ರಿ ) ಅವರನ್ನ ಆತ್ಮೀಯ ಸ್ನೇಹಿತೆ ಎಂದು ಕರೆದು ಅವರಿಗೆ ಶುಭ ಹಾರೈಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಅಚ್ಚರಿ ಮೂಡಿಸಿದ್ದರು..
ಇದೀಗ ಸಾರ್ವಜನಿಕವಾಗಿ ಮೊದಲಬಾರಿಗೆ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ.. ಇತ್ತೀಚೆಗೆ ನಡೆದ ರಾಕ್ ವಿತ್ ರಾಜಾ ಸಂಗೀತ ಕಾರ್ಯಕ್ರಮಕ್ಕೆ ತಮ್ಮ ಇಬ್ಬರು ಮಕ್ಕಳಾದ ಯಾತ್ರಾ ಮತ್ತು ಲಿಂಗ ಅವರ ಜೊತೆಗೆ ಆಗಮಿಸಿ ಭಾಗಿಯಾಗಿದ್ದರು.
ಕೆಲವು ತಿಂಗಳ ಹಿಂದೆಯಷ್ಟೇ ಐಶ್ವರ್ಯ ಜತೆಗೆ ವಿಚ್ಛೇಧನ ಪಡೆಯುತ್ತಿರುವುದಾಗಿ ನಟ ಧನುಷ್ ಘೋಷಣೆ ಮಾಡಿದ್ದರು. ತಾವಿಬ್ಬರೂ ಗೌರವಯುತವಾಗಿಯೇ ದೂರವಾಗುತ್ತಿದ್ದೇವೆ ಎಂದು ಐಶ್ವರ್ಯ ಹಾಗೂ ಧನುಷ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.