RRR : ಅದ್ಧೂರಿ ಪ್ರೀ ರಿಲೀಸ್ : ಮಾನ ಮರ್ಯಾದದೆ ಇರೋರು ಮಾಡೋ ಕೆಲಸ ಅಲ್ಲ – ವಾಟಾಳ್
ಮಾರ್ಚ್ 25 ರಂದು ರಿಲೀಸ್ ಆಗಲಿರುವ RRR ಸಿನಿಮಾದ ಕ್ರೇಜ್ ದೇಶ ವಿದೇಶಗಳಲ್ಲೂ ಇದೆ. ಸಿನಿಮಾ ತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ.. ದೇಶ ವಿದೇಶಗಳಲ್ಲಿ ಪ್ರಚಾರ ನಡೆಸುತ್ತಿದೆ.. ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲೂ ಸಿನಿಮಾತಂಡ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ನಡೆಸಿತ್ತು.. ಈ ಕಾರ್ಯಕ್ರಮದಲ್ಲಿ ಶಿವಣ್ಣ , ಸಿಎಂ ಬಸವರಾಜ ಬೊಮ್ಮಾಯಿ , ಸಚಿವ ಡಾ. ಕೆ ಸುಧಾಕರ್ ಸೇರಿದಂತೆ ಘಟಾನುಘಟಿಗಳು ಭಾಗಿಯಾಗಿದ್ದರು..
ಇದೀಗ ಇದೇ ವಿಚಾರವಾಗಿ ಕಕನ್ನಡಪರ ಹೋರಾಟಗಾರ ವಾಟಾಲ್ ನಾಗರಾಜ್ ಅವರು ಆಕ್ರೋಶ ಹೊರಹಾಕಿದ್ದು , ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳನ್ನ ಬಹಿಷ್ಕಾರ ಹಾಕಬೇಕು. ಶಿವರಾಜ್ ಕುಮಾರ್ ಅವರು RRR ಪ್ರಿ ರಿಲೀಸ್ ಇವೆಂಟ್ ಗೆ ಹೋಗಬಾರದಿತ್ತು. ಮಾನ ಮರ್ಯಾದೆ ಇರೋರು ಮಾಡುವ ಕೆಲಸ ಇದಲ್ಲ ಎಂದಿದ್ದಾರೆ..
ವಾಟಾಳ್ ನಾಗರಾಜ್ ಅವರು ಈ ರೀತಿ ಮಾತನಾಡಲು ಕಾರಣವಾಗಿದ್ದು, ಆರ್ ಆರ್ ಆರ್ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಅನ್ನು ಚಿಕ್ಕಬಳ್ಳಾಪುರದಲ್ಲಿ ಮಾಡಿದ್ದು.
ಮಾರ್ಚ್ 19 ರಂದು ಚಿಕ್ಕಬಳ್ಳಾಪುರದಲ್ಲಿ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ.ಕೆ.ಸುಧಾಕರ್ , ನಟ ಶಿವರಾಜ್ ಕುಮಾರ್ ಆಗಮಿಸಿದ್ದರು.
ಕರ್ನಾಟಕದಲ್ಲಿ ತೆಲುಗು ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಮಾಡಿದ್ದು, ಇದೀಗ ವಾಟಾಳ್ ನಾಗರಾಜ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ನಾನು ಅಂದು ಮೈಸೂರು ನಗರದಲ್ಲಿ ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಬೇಡ ಅಂತ ಚಳವಳಿ ಮಾಡಿದೆ. ಆದರೆ ಅದೇ ದಿನ ಚಿಕ್ಕಬಳ್ಳಾಪುರದಲ್ಲಿ ಆರ್ಆರ್ಆರ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಮಾಡಿದ್ದಾರೆ. ಇದು ನನಗೆ ಬಹಳ ನೋವು ತಂದಿದೆ.
ಇದು ಗಂಡು ಮೆಟ್ಟಿದ ಕನ್ನಡಿಗರ ನೆಲ, ಇಲ್ಲಿ ಕನ್ನಡಕ್ಕೆ, ಕನ್ನಡಿಗರಿಗೆ, ಮಾನ್ಯತೆ ಗೌರವ ಇರಬೇಕು. ಆದರೆ ತೆಲುಗು ಭಾಷೆಯ ಆರ್ಆರ್ಆರ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಾಡಿದ್ದಾರೆ. ಮಾನ ಮಾರ್ಯಾದೆ ಇರುವವರು ಮಾಡುವ ಕೆಲಸ ಇದಲ್ಲ ಅಂತ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಚಿಕ್ಕಬಳ್ಳಾಪುರದಲ್ಲಿ ಆರ್ ಆರ್ ಆರ್ ಸಿನಿಮಾ ಪ್ರಿ ರಿಲೀಸ್ ಕಾರ್ಯಕ್ರಮ ಮಾಡಿದ್ದು, ಕನ್ನಡ ಚಿತ್ರರಂಗಕ್ಕೆ ಅಪಮಾನ ಎಂದ ವಾಟಾಳ್ ನಾಗರಾಜ್, ಸಚಿವ ಡಾ. ಕೆ. ಸುಧಾಕರ್ ಬಹಿರಂಗ ಕ್ಷಮಾಪಣೆ ಕೇಳಬೇಕು. ಸಚಿವ ಸ್ಥಾನಕ್ಕೆ ಸುಧಾಕರ್ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.