ಮಾರ್ಚ್ 25 ರಂದು ರಿಲೀಸ್ ಆಗಲಿರುವ RRR ಸಿನಿಮಾದ ಕ್ರೇಜ್ ದೇಶ ವಿದೇಶಗಳಲ್ಲೂ ಇದೆ. ಸಿನಿಮಾ ತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ.. ದೇಶ ವಿದೇಶಗಳಲ್ಲಿ ಪ್ರಚಾರ ನಡೆಸುತ್ತಿದೆ.. ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲೂ ಸಿನಿಮಾತಂಡ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ನಡೆಸಿತ್ತು.. ಈ ಕಾರ್ಯಕ್ರಮದಲ್ಲಿ ಶಿವಣ್ಣ , ಸಿಎಂ ಬಸವರಾಜ ಬೊಮ್ಮಾಯಿ , ಸಚಿವ ಡಾ. ಕೆ ಸುಧಾಕರ್ ಸೇರಿದಂತೆ ಘಟಾನುಘಟಿಗಳು ಭಾಗಿಯಾಗಿದ್ದರು..
ಇನ್ನೇನು 2 ದಿನಗಳಷ್ಟೇ ಬಾಕಿಯಿದೆ.. ಸಿನಿಮಾ ರಿಲೀಸ್ ಗೆ.. ಇದರ ಬೆಲ್ಲೇ ರಾಜ್ಯಗಳ ಸುತ್ತಾಟ ಆರಂಭಿಸಿದೆ ಜಕ್ಕಣ್ಣನ ಟೀಮ್.. ಇತ್ತೀಚೆಗೆ RRR ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಪಂಜಾಬ್ ಗೆ ವಿಸಿಟ್ ಮಾಡಿದೆ. ಈ ವೇಳೆ ಜೂನಿಯರ್ ಎನ್ಟಿಆರ್, ರಾಮ್ ಚರಣ್ ಮತ್ತು ರಾಜಮೌಳಿ ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ್ದು ಈ ಫೋಟೋಗಳು ವೈರಲ್ ಆಗಿವೆ..
ಬೆಂಗಳೂರು, ಹೈದರಾಬಾದ್ ಮತ್ತು ದುಬೈ ನಗರಗಳಲ್ಲಿ ಪ್ರಚಾರ ಮುಗಿಸಿದ ನಂತರ ನಿರ್ದೇಶಕ ರಾಜಮೌಳಿ ಮತ್ತು ಎನ್ಟಿಆರ್ ಮತ್ತು ರಾಮ್ ಚರಣ್ ಬರೋಡಾದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಏಕತಾ ಪ್ರತಿಮೆಗೆ ಭೇಟಿ ನೀಡಿದರು. ಸಿನಿಮಾದಲ್ಲಿ ರಾಮ್ ಚರಣ್ , ಜ್ಯೂ. ಎನ್ಟಿಆರ್, ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದದಾರೆ.
PEN ಸ್ಟುಡಿಯೋಸ್ ನ ಜಯಂತಿ ಲಾಲ್ ಗಡ ಅವರು ಉತ್ತರ ಭಾರತದಾದ್ಯಂತ ಥಿಯೇಟ್ರಿಕಲ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ ಮತ್ತು ಎಲ್ಲಾ ಭಾಷೆಗಳಿಗೆ ವಿಶ್ವದಾದ್ಯಂತ ಎಲೆಕ್ಟ್ರಾನಿಕ್ ಹಕ್ಕುಗಳನ್ನು ಖರೀದಿಸಿದ್ದಾರೆ. ತೆಲುಗು ಭಾಷೆಯ ಆಕ್ಷನ್ ಡ್ರಾಮಾ ಚಿತ್ರವನ್ನು ಡಿವಿವಿ ಎಂಟರ್ಟೈನ್ಮೆಂಟ್ಸ್ನ ಡಿ ವಿ ವಿ ದಾನಯ್ಯ ನಿರ್ಮಿಸಿದ್ದಾರೆ. RRR ಚಿತ್ರ ಮಾರ್ಚ್ 25 ರಂದು ಬಿಡುಗಡೆಯಾಗುತ್ತಿದೆ.