KGF 2 – ಟ್ರೇಲರ್ ಲಾಂಚ್ ಕಾರ್ಯಕ್ರಮ ಹೋಸ್ಟ್ ಮಾಡಲಿರುವ ಕರಣ್ ಜೋಹರ್
ಮಾರ್ಚ್ 25 ಕ್ಕೆ ಭಾರತದ ಮೋಸ್ಟ್ ಆಂಟಿಸಿಪೇಡ್ ಸಿನಿಮಾ ಕೆಜಿಎಫ್ ಚಾಪ್ಟರ್ 2 ನ ಟ್ರೇಲರ್ ರಿಲೀಸ್ ಆಗಲಿದೆ.. ಅಂದ್ಹಾಗೆ ಟ್ರೇಲರ್ ರಿಲೀಸ್ ಆಗಿ ಬಾಹುಬಲಿ , RRR , ರಾಧೆ ಶ್ಯಾಮ್ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡೋದ್ರಲ್ಲಿ ಡೌಟೇ ಇಲ್ಲ ಎನ್ನಲಾಗ್ತಿದೆ..
ಈ ನಡುವೆ ಟ್ರೇಲರ್ ಅನ್ನ ಬಹಳ ಗ್ರ್ಯಾಂಡ್ ಆಗಿ ಲಾಂಚ್ ಮಾಡುವ ಪ್ಲಾನ್ ನಲ್ಲಿದೆ ಸಿನಿಮಾ ತಂಡ.. ಏಪ್ರಿಲ್ 14 ಕ್ಕೆ ಸಿನಿಮಾ ರಿಲೀಸ್ ಆಗುತ್ತೆ.. ಈಗಿನಿಂದ್ಲೇ ಅಭಿಮಾನಿಗಳು ಕೌಂಟ್ ಡೌನ್ ಶುರು ಮಾಡಿದ್ದು , ಸೋಷಿಯಲ್ ಮೀಡಿಯಾದಲ್ಲಿ ‘ತೂಫಾನ್’ ಹವಾ ಸೃಷ್ಟಿಯಾಗಿದೆ.. ಅದ್ರಲ್ಲೇ ಇನ್ನೆರೆಡೇ ದಿನಗಳಲ್ಲಿ ಯೂಟ್ಯೂಬ್ ನಲ್ಲಿ ಸುನಾಮಿ ಅಪ್ಪಳಿಸಲಿದೆ.. ಅಂದ್ರೆ ಟ್ರೇಲರ್ ಲಾಂಚ್ ಆಗಲಿದೆ..
ಶಿವರಾಜ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ, ಬರಹಗಾರ, ಕಲಾವಿದ ಕರಣ್ ಜೋಹಾರ್ ಅವರು ನಿರೂಪಣೆ ಜವಾಬ್ದಾರಿ ಹೊತ್ತಿದ್ದಾರೆ ಎಂದೇ ಹೇಳಲಾಗ್ತಿದೆ.
ಈ ಟ್ರೇಲರ್ ಲಾಂಚ್ ಗಾಗಿ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಕರಣ್. ಅಂದ್ಹಾಗೆ ಈಗಾಗಲೇ ಅನೇಕ ಶೋಗಳನ್ನ ಕರಣ್ ಜೋಹರ್ ಹೋಸ್ಟ್ ಮಾಡಿದ್ರೂ ಇದೇ ಮೊದಲ ಬಾರಿಗೆ ಕರಣ್ ಜೋಹರ್ ಅವರು ಕನ್ನಡ ಸಿನಿಮಾವೊಂದರ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿರುವುದು ವಿಶೇಷ.
ಮಾರ್ಚ್ 27ರಂದು ಸಂಜೆ 6.45ಕ್ಕೆ ಸರಿಯಾಗಿ ಬಿರುಗಾಳಿ ಏಳಲಿದೆ ಅಂದ್ರೆ KGF 2 ಟ್ರೇಲರ್ ರಿಲೀಸ್ ಆಗುತ್ತಿದೆ.. ಚಿತ್ರತಂಡದ ಪ್ರಮುಖ ಕಲಾವಿದರು, ತಂತ್ರಜ್ಞರು ಮತ್ತು ಕನ್ನಡದ ಸ್ಟಾರ್ ನಟರು ಹಾಗೂ ರಾಜಕಾರಣಿಗಳು ಸಹ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ.
ಅಷ್ಟೇ ಅಲ್ಲದೇ ಬಾಲಿವುಡ್ ನ ದಾದಾ ಸಂಜಯ್ ದತ್, ಪೃಥ್ವಿರಾಜ್, ರವೀನಾ ಟಂಡನ್, ಯಶ್, ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ಮಾಪಕ ವಿಜಯ ಕಿರಗಂದೂರು ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿಲಿದ್ದಾರೆ..
ವಿಶ್ವಾದ್ಯಂತ 5 ಭಾಷೆಗಳಲ್ಲಿ ಸಿನಿಮಾ ಒಟ್ಟಿಗೆ ಬಿಡುಗಡೆ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳ ಮತ್ತು ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ಕಾರಣಕ್ಕೆ ಟ್ರೈಲರ್ ಬಿಡುಗಡೆಗೆ 5 ಭಾಷೆಯ ಪತ್ರಕರ್ತರನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 180ಕ್ಕೂ ಹೆಚ್ಚು ಬೇರೆ ಭಾಷೆಯ ಪತ್ರಕರ್ತರು ಆಗಮಿಸಲಿದ್ದಾರೆ ಎನ್ನಲಾಗಿದೆ..