Samantha : ಡಿವೋರ್ಸ್ ಗೆ ಕಾರಣ ಎಂದರೂ ಪ್ರೀತಮ್ ಜೊತೆಗೆ ನಿಲ್ಲದ ಸ್ಯಾಮ್ ಸ್ನೇಹ
ನಾಗ ಚೈತನ್ಯ ಜೊತೆಗೆ ಡಿವೋರ್ಸ್ ನಂತರ ಸಮಂತಾ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿದ್ದಾರೆ.. ಬಾಲಿವುಡ್ , ಹಾಲಿವುಡ್ ಗೆ ಪಾದಾರ್ಪಣೆ ಮಾಡ್ತಿದ್ದಾರೆ.. ಈ ನಡುವೆ ಸಮಂತಾ ನಾಗಚೈತನ್ಯ ಅವರನ್ನ ಸೋಷಿಯಲ್ ಮೀಡಿಯಾಗಳಿಂದಲೂ ಅನ್ ಫಾಲೋ ಮಾಡಿದ್ಧಾರೆ..
ಸಮಂತಾ ನಾಗಚೈತನ್ಯ ಅವರ ಡಿವೋರ್ಸ್ ಗೆ ನಿಖರ ಕಾರಣ ಗೊತ್ತಿಲ್ಲವಾದ್ರೂ ಹಲವಾರು ಕಾರಣಗಳು ಚರ್ಚೆಯಾಗಿವೆ.. ಅದ್ರಲ್ಲೇ ಒಂದು ಕಾರಣ ಸಮಂತಾ ಅವರ ಕಾಸ್ಟ್ಯೂಮ್ ಡಿಸೈನರ್ ಪ್ರೀತಂ ಜುಕಾಲ್ಕರ್ ಜೊತೆಗಿನ ಆಪ್ತತೆ ಎಂದೇ ಸಾಕಷ್ಟು ಚರ್ಚೆ , ಟ್ರೋಲ್ ಆಗಿದ್ದೂ ಇದೆ..
ಅವರಿಬ್ಬರ ಕೆಲ ಫೋಟೋಗಳೂ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪ್ರೀತಂ ಹುಟ್ಟುಹಬ್ಬದ ದಿನ ಸಮಂತಾ ಒಂದು ಫೋಟೊಶೇರ್ ಮಾಡಿ ಅವರಿಗೆ ವಿಶ್ ಮಾಡಿದ್ದರು. ಅದರಲ್ಲಿ ಸಮಂತಾ ಮತ್ತು ಪ್ರೀತಂ ಬಹಳ ಸಲುಗೆಯಿಂದ ಇದ್ದಂತೆ ಕಾಣುತ್ತಿತ್ತು. ಇದರಿಂದಾಗಿ ಸಮಂತಾ ಟ್ರೋಲ್ ಗೆ ಒಳಗಾಗಿದ್ದರು. ಆಗ ಸಮಂತಾ ಈ ಫೋಟೋವನ್ನು ಡಿಲೀಟ್ ಮಾಡಿದ್ದರು.
ಆದ್ರೂ ಸಮಂತಾ ಮಾತ್ರ ಪ್ರೀತಂ ಜುಕಾಲ್ಕರ್ ಜೊತೆಗೆ ಈಗಲೂ ಅಷ್ಟೇ ಉತ್ತಮ ಸ್ನೇಹ ಹೊಂದಿದ್ದಾರೆ.. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಡಿಸೈನರ್ ಪ್ರೀತಂ ಜುಕಾಲ್ಕರ್ ಗೆ ಹೇರ್ಕಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು.. ಕೆಲವರು ಟ್ರೋಲ್ ಮಾಡಿದ್ರೂ ಇನ್ನೂ ಕೆಲವರು ಸಮಂತಾ ಪರ ನಿಂತಿದ್ಧಾರೆ..