Nitya menon
ನಿತ್ಯಾ ಮೆನನ್ ಬಂದು ಬೇಡಿಕೊಂಡ್ರು ಮದುವೆಯಾಗೋದಿಲ್ಲ…!!!
ಸ್ಟಾರ್ ಸೆಲೆಬ್ರಿಟಿಗಳಿಗೆ ಕೆಲ ಹುಚ್ಚು ಅಭಿಮಾನಿಗಳು ಇರುತ್ತಾರೆ.. ಅವರ ಅಭಿಮಾನದ ಕ್ರೇಜ್ ಬೇರೆಯೇ ಲೆವೆಲ್ ನಲ್ಲಿರುತ್ತೆ.. ಕೆಲವೊಮ್ಮೆ ಅವರ ಆ ಹುಚ್ಚು ಅಭಿಮಾನ , ಅವರದ್ದೇ ನೆಚ್ಚಿನ ನಟರಿಗೆ ಕೆಲ ಸಂಕಷ್ಟಗಳನ್ನ ತಂದೊಡ್ಡುತ್ತೆ..
ಅಂದ್ಹಾಗೆ ನಮ್ಮ ಕನ್ನಡದ ಸುಂದರಿ ನಿತ್ಯಾ ಮೆನನ್ ಕನ್ನಡಕ್ಕಿಂತ ಹೆಚ್ಚು ಕ್ಲಿಕ್ ಆಗಿದ್ದು ಪರಭಾಷೆಗಳಲ್ಲೇ.. ಸೌತ್ ಸಿನಿಮಾ ಇಂಡಸ್ಟ್ರಿಯ ಬಬ್ಲಿ ನಟಿ ನಿತ್ಯಾಗೆ ಮಲಯಾಳಂನಲ್ಲಿ ದೊಡ್ಡ ಅಭಿಮಾನಿಗಳ ವರ್ವಿದೆ..
ಆದ್ರೆ ಓರ್ವ ಹುಚ್ಚು ಅಭಿಮಾನಿ ನಿತ್ಯಾ ಮೆನನ್ ಅವರನ್ನ ಮದುವೆಯಾಗೇ ಆಗ್ತೀನಿ ಎಂದು ಹಠಕ್ಕೆ ಬಿದ್ದು ನಿತ್ಯಾ ಮೆನನ್ ಅವರ ಮನೆಯ ಬಳಿಯೂ ಹೋಗಿದ್ದುಂಟು.. ಆದ್ರೀಗ ಅದೇ ಅಭಿಮಾನಿ , ನಾನು ನಿತ್ಯಾ ಮೆನನ್ ಮದುವೆಯಾಗೋದಿಲ್ಲ.. ನಿತ್ಯಾ ಮೆನನ್ ಮುಂದೆ ತುಂಬಾ ಪಶ್ಚಾತಾಪ ಪಡ್ತಾರೆ ಎಂದಿದ್ದಾನೆ..
ಸಂತೋಶ್ ವರ್ಕಿ ಎಂಬ ಹುಚ್ಚು ಅಭಿಮಾನಿ ಈ ಹಿಂದೆ ನಿತ್ಯಾ ಮೆನನ್ ಅನ್ನು ಮದುವೆಯಾಗುವುದಾಗಿ ಹೇಳಿದ್ದ. ನಿತ್ಯಾ ಮೆನನ್ಗೆ ಪ್ರೊಪೋಸ್ ಮಾಡಲೆಂದು ಆಕೆಯ ನಿವಾಸಕ್ಕೆ ಸಹ ಹೋಗಿದ್ದ. ಆದ್ರೆ ಈಗ ನಾನು ನಿತ್ಯ ಮೆನನ್ ಅನ್ನು ವಿವಾಹವಾಗುವುದಿಲ್ಲ. ನನಗೆ ನಿತ್ಯಾ ಮೆನನ್ ಅನ್ನು ಮದುವೆಯಾಗಲು ಆಸಕ್ತಿ ಇಲ್ಲ. ಆಕೆ ನನಗೆ ಸರಿಯಾದವಳಲ್ಲ. ಅವರು ನಿಜವಾಗಿಯೂ ಒಳ್ಳೆಯವರಾಗಿದ್ದರೆ ತಮ್ಮ ಮೊಬೈಲ್ ನಂಬರ್ ಅನ್ನಾದರೂ ನನಗೆ ನೀಡುತ್ತಿದ್ದಳು.
ಆಕೆ ಅದನ್ನೂ ಮಾಡಿಲ್ಲ.. ನಾನು ನಿತ್ಯಾ ಮೆನನ್ ಮೇಲಿನ ಪ್ರೀತಿಯನ್ನು ಕಳೆದುಕೊಂಡಿದ್ದೇನೆ. ಆಕೆಗಾಗಿ ಅಲೆದು ಅಲೆದು ನಾನು ನನ್ನ ಸಮಯ-ಶಕ್ತಿ ವ್ಯರ್ಥ ಮಾಡಿಕೊಂಡಿದ್ದೇನೆ. ಈಗ ಆಕೆಯೇ ಬಂದು ನನ್ನ ಎದುರು ನಿಂತು ನನ್ನನ್ನು ಮದುವೆಯಾಗು ಎಂದು ಕೇಳಿ ಕೊಂಡರೂ ನಾನು ಆಕೆಯನ್ನು ಮದುವೆಯಾಗುವುದಿಲ್ಲ. ನನ್ನನ್ನು ಕಳೆದುಕೊಂಡು ಆಕೆ ಜೀವನದಲ್ಲಿ ಪಶ್ಚಾತ್ತಾಪ ಪಡಲಿದ್ದಾಳೆ ಎಂದು ಹೆಚ್ಚು ಹೇಳಿಕೆ ನೀಡಿದ್ದಾನೆ..