RRR : ಬಾಕ್ಸ್ ಆಫೀಸ್ ಶೇಕ್ – ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ..??
ಮಾರ್ಚ್ 25 ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ಶೇಕ್ ಮಾಡಿರುವ ರಾಜಮೌಳಿ ನಿರ್ದೇಶನದ RRR ಸಿನಿಮಾ ಭರ್ಜರಿಯಾಗಿ ಓಡುತ್ತಿದೆ.. ಎಲ್ಲಿಂದಲೂ ಸಿನಿಮಾ ಬಗ್ಗೆ ನೆಗೆಟಿವ್ ಟಾಕ್ ಕೇಳಿ ಬರುತ್ತಿಲ್ಲ.. ಸಿನಿಮಾ ನೋಡಿದವರೆಲ್ಲಾ,, ಸಿನಿಮಾ ಅದ್ಭುತ ,, ವಾವ್ , ಅದುರ್ಸ್ ಹೀಗೆ ರಿವ್ಯೂ ಕೊಡ್ತಿದ್ದಾರೆ..
ಸಿನಿಮಾ ನೆಕ್ಸ್ಟ್ ಲೆವೆಲ್…
ಇದೀಗ ನಿರೀಕ್ಷೆಯಂತೆಯೇ ಫಸ್ಟ್ ಡೇ ಕಲೆಕ್ಷನ್ ವಿಚಾರದಲ್ಲಿ RRR ಸಿನಿಮಾ ಬಾಹುಬಲಿ 2 ರೆಕಾರ್ಡ್ ಪೀಸ್ ಪೀಸ್ ಮಾಡಿದೆ.. ಹೌದು ಬಾಹುಬಲಿ ಫಸ್ಟ್ ಡೇ ಓವರ್ ಆಲ್ ಬಾಕ್ಸ್ ಆಫೀಸ್ ಕಲೆಕ್ಷನ್ 122 ಕೋಟಿ ರೂ.. ಆದ್ರೆ RRR ಫಸ್ಟ್ ಡೇ ಕಲೆಕ್ಷನ್ 200 ಕೋಟಿ ರೂ ದಾಟಿದೆ..
ಹೌದು.. ವರದಿಯ ಪ್ರಕಾರ RRR ಚಿತ್ರದ ಮೊದಲ ದಿನ ವಿಶ್ವದಾದ್ಯಂತ ಒಟ್ಟಾರೆ 260 ಕೋಟಿ. ಗಳಿಸಿದೆ ಎನ್ನಲಾಗಿದೆ.. ತೆಲುಗು ರಾಜ್ಯಗಳಾದ ಆಂಧ್ರ, ತೆಲಂಗಾಣದಲ್ಲೇ ಸುಮಾರು 120 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ.. ಅಂದ್ಹಾಗೆ ಕರ್ನಾಟದಲ್ಲಿ RRR 14 ರೂಪಾಯಿ ಗಳಿಸಿದೆ.. ಅಂದ್ರೆ ಫಸ್ಟ್ ಡೇ ಕಲೆಕ್ಷನ್ ನಲ್ಲಿ ಜೇಮ್ಸ್ ರೆಕಾರ್ಡ್ ಬೀಟ್ ಮಾಡೋಕೆ ಸಾಧ್ಯವಾಗಿಲ್ಲ..
ತಮಿಳುನಾಡಿನಲ್ಲಿ ಸುಮಾರು ರೂ 10 ಕೋಟಿ ಗಳಿಸಿದೆ.. ಹಿಂದಿ ಅವತರಣಿಕೆಯಲ್ಲಿ ಮೊದಲ ದಿನ 25 ಕೋಟಿ ರೂ ಸಂಗ್ರಹಿಸಿದೆ.. ಸಿನಿಮಾ ಪುಷ್ಪಾ , ಬಾಹುಬಲಿ , ಬಾಹುಬಲಿ 2 , ರೋಬೋ , ರಾಧೆಶ್ಯಾಮ್ ಎಲ್ಲಾದರ ರೆಕಾರ್ಡ್ ಬೀಟ್ ಮಾಡಿ ಹಾಕಿದೆ.. ಸುಮಾರು 500 ಕೋಟಿ ಬಜೆಟ್ ನಲ್ಲಿ ತಯಾರಾಗಿರುವ ಈ ಸಿನಿಮಾ ಬಾಕ್ಸ್ ಆಫೀಸ್ ಬಿಟ್ಟು ಹೊರಗೆ 800 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.. ಇದೀಗ ಬಾಕ್ಸ್ ಆಫೀಸ್ ನಲ್ಲಿ ಒಟ್ಟು 260 ಕೋಟಿ ಕಲೆಕ್ಷಷನ್ ಆಗಿದ್ದು , ಒಟ್ಟಾರೆ 800 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.. ಚಿತ್ರಕ್ಕೆ ಓವರ್ಸೀಸ್ನಲ್ಲಿ 75 ಕೋಟಿ ರೂ ಹರಿದುಬಂದಿದೆ ಎನ್ನಲಾಗಿದೆ..