KGF 2 vs Beast – ಸಮೀಕ್ಷೆ ರಿಸಲ್ಟ್ ಯಾವ ಸಿನಿಮಾ ಪರವಿದೆ..??
ಭಾರತದಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿರೋ ಸಿನಿಮಾ KGF 2… ರಾಕಿ ಭಾಯ್ ತೂಫಾನಿ ಎಂಟ್ರಿಗಾಗಿ ಫ್ಯಾನ್ಸ್ ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.. ಈ ನಡುವೆ ಮತ್ತೊಂದು ಹೈಲೀ ಆಂಟಿಸಿಪೇಟೆಡ್ ಬೀಸ್ಟ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿ , ಬಾಕ್ಸ್ ಆಫೀಸ್ ರೆಕಾರ್ಡ್ ಮಾಡುವ ಕೆಜಿಎಫ್ 2 ಸಿನಿಮಾ ಪ್ಲಾನ್ ಗೆ ಅಡಚಣೆ ಉಂಟು ಮಾಡಿದೆ.. ಏಪ್ರಿಲ್ನಲ್ಲಿ 14 ಕ್ಕೆ KGF 2 ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಮುಂದೆ ನಿಲ್ಲೋ ಧೈರ್ಯ ಯಾವ ಸಿನಿಮಾಗಳಿಗೂ ಇಲ್ಲ.. ಆದ್ರೆ ರಾಕಿಗೆ ಟಕ್ಕರ್ ಕೊಡೋಕೆ ದಳಪತಿ ಸಜ್ಜಾಗಿದ್ದಾರೆ..
ಏಪ್ರಿಲ್ 13 ಕ್ಕೆ ಬೀಸ್ಟ್ ಸಿನಿಮಾ ರಿಲೀಸ್ ಆಗ್ತಿದೆ.. ತಮಿಳು ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಬೀಸ್ಟ್ ರಿಲೀಸ್ ಆದ ಮಾರನೇ ದಿನವೇ ಕೆಜಿಎಫ್ ಸಿನಿಮಾ ರಿಲೀಸ್ ಆಗಲಿದೆ.. ಆದರೆ ಈ ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿದ್ದು, ಏಪ್ರಿಲ್ ನಲ್ಲಿ ರಿಲೀಸ್ ಆಗಲಿವೆ. ಎರಡೂ ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದರೆ ಕಲೆಕ್ಷನ್ ಮೇಲೆ ಹೊಡೆತ ಬೀಳುವುದು ಖಚಿತ.
ಹೀಗಾಗಿ ಫ್ಯಾನ್ಸ್ ಸ್ವಲ್ಪ ತಲೆ ಕೆಡಿಸಿಕೊಂಡಿದ್ದಾರೆ.. ಆದ್ರೆ ಇದೀಗ ಸಮೀಕ್ಷೆಯೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಸಿನಿಮಾಗೆ ಎನ್ನುವುದು ಕನ್ ಫರ್ಮ್ ಆಗಿದೆ..
ಇತ್ತೀಚೆಗೆ ಹೊರಬಿದ್ದ ಸಮೀಕ್ಷೆಯಲ್ಲಿ ಯಾವ ಸಿನಿಮಾ ನೋಡಲು ಜನರು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎನ್ನುವುದು ಗೊತ್ತಾಗಿದೆ. ಇದರಲ್ಲಿ ಬೀಸ್ಟ್ ಚಿತ್ರಕ್ಕಿಂತಲೂ ಕೆಜಿಎಫ್ 2 ಚಿತ್ರವನ್ನು ನೋಡಲು ಹೆಚ್ಚು ಜನ ಆಸಕ್ತರಾಗಿರೊದು ತಿಳಿದುಬಂದಿದೆ..
ಬುಕ್ ಮೈ ಶೋನಲ್ಲಿ ಇರುವ ಸಮೀಕ್ಷೆಯ ಅಂಕಿ ಅಂಶದ ಪ್ರಕಾರ ಕೆಜಿಎಫ್ 2 ಚಿತ್ರವನ್ನು ನೋಡಬೇಕು ಎನ್ನುವ ಆಸಕ್ತಿ ಇರುವ ಜನ 599 ಸಾವಿರ ಮಂದಿ ಇದ್ದಾರೆ. ಹಾಗೆ ತಮಿಳಿನ ಬೀಸ್ಟ್ ಚಿತ್ರವನ್ನು ನೋಡಲು ಆಸಕ್ತಿಯುಳ್ಳವರ ಸಂಖ್ಯೆ 114.7 ಸಾವಿರ ಇದೆ.