ರಾಧಿಕಾ ಪಂಡಿತ್ ಯಶ್ ಬದುಕಿಗೆ ಬಂದ ಮೇಲೆ…???? – ‘ರಾಮಾಚಾರಿ’ ಜೋಡಿ ಬಗ್ಗೆ ಶಿವಣ್ಣ ಮಾತು..!!
ಇಂದು ಅದ್ಧೂರಿಯಾಗಿ ಟ್ರೇಲರ್ ಲಾಂಚ್ ಈವೆಂಟ್ ನಡೆಸಿ KGF 2 ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದೆ.. ಐದೂ ಭಾಷೆಗಳಲ್ಲೂ ಟ್ರೇಲರ್ ರಿಲೀಸ್ ಮಾಡಿ ಸೋಷಿಯಲ್ ಮೀಡಿಯಾಗೆ ಬೆಂಕಿ ಇಟ್ಟಿದೆ.. ಯೂಟ್ಯೂಬ್ ನಲ್ಲಿ ಟ್ರೇಲರ್ ಹವಾ ನೆಕ್ಸ್ಟ್ ಲೆವೆಲ್…
ಟ್ರೇಲರ್ ಲಾಂಚ್ ಈವೆಂಟ್ ನಲ್ಲಿ ಶಿವರಾಜ್ ಕುಮಾರ್ , ರವೀನಾ ತಂಡನ್ , ಸಂಜಯ್ ದತ್ ಸೇರಿದಂತೆ ಹಲವರು ಭಾಗಿಯಾಗಿದ್ರು..
ಟ್ರೈಲರ್ ವೀಕ್ಷಿಸಿದ ಬಳಿಕ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮೊದಲಿಗೆ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ..
ವಿಶೇಷ ಅಂದ್ರೆ ಶಿವಣ್ಣ ‘ಓಂ’ನ ‘ಐ ಲವ್ ಯೂ, ಯೂ ಮಸ್ಟ್ ಲವ್ ಮಿ’ ಅನ್ನೋ ಡೈಲಾಗ್ ಮೂಲಕ ಮಾತು ಆರಂಭಿಸಿದ್ದು , ಅಲ್ಲಿದ್ದ ಪ್ರತಿಯೊಬ್ಬರನ್ನೂ ಥ್ರಿಲ್ ಗೊಳಿಸಿತ್ತು.. ಅದಾದ ನಂತರ ಐ ಹೇಟ್ ವೈಲೆನ್ಸ್, ಬಟ್ ವೈಲೆನ್ಸ್ ಲೈಕ್ಸ್ ಮಿ, ಸೋ ಐ ಕಾಂಟ್ ಅವಾಯ್ಡ್ ಇಟ್ ಎಂದು ಟ್ರೇಲರ್ ನಲ್ಲಿನ ಯಶ್ ಡೈಲಾಗ್ ಹೊಡೆದರು..
ನಂತರ ಟ್ರೈಲರ್ ತುಂಬಾ ಅದ್ಭುತವಾಗಿ ಬಂದಿದೆ. ಪ್ರಶಾಂತ್ ನೀಲ್, ಯಶ್, ನಿಮ್ಮ ಕೆಲಸ ತುಂಬ ಅದ್ಭುತವಾಗಿ ಮೂಡಿ ಬಂದಿದೆ. ಯಶ್ ನನಗೆ ಮೊದಲಿನಿಂದಲೂ ಆತ್ಮೀಯ. ಅವನು ತುಂಬ ಹ್ಯಾಂಡ್ಸಮ್ ಆಗಿ ಕಾಣಿಸಿಕೊಳ್ತಾನೆ ಎಂದಿದ್ದಾರೆ.
ಅಷ್ಟೇ ಅಲ್ಲ ರಾಧಿಕಾ ಪಂಡಿತ್ ಯಶ್ ಬದುಕಲಿ ಬಂದ ನಂತರ ಅವನ ಲಕ್ ಮತ್ತಷ್ಟು ಹೆಚ್ಚಾಗಿದೆ. ರಾಧಿಕಾ ಯಶ್ ತುಂಬಾ ಕ್ಯೂಟ್ ಕಪಲ್. ನಮ್ಮ ಕುಟುಂಬ ಮತ್ತು ಯಶ್ ಕುಟುಂಬ ತುಂಬಾ ಆತ್ಮೀಯವಾಗಿ ಇದ್ದೇವೆ. ಹೆಚ್ಚೇನು ಹೇಳಲ್ಲಾ ಇಡೀ ಕೆಜಿಎಫ್ ಚಾಪ್ಟರ್ 2 ತಂಡಕ್ಕೆ ನನ್ನ ಶುಭಾಶಯಗಳು ಎಂದು ಹೇಳಿದ್ದಾರೆ..