RRR ಕಿಲ್ಲರ್ – ಸಿನಿಮಾ ನೋಡಿ ಕೊಂಡಾಡಿದ ಅಲ್ಲು ಅರ್ಜುನ್
RRR ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ.. ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ಬಾಹಹುಬಲಿ 2 ರೆಕಾರ್ಡ್ ಮುರಿದಿದೆ.. ಈ ಸಿನಿಮಾಗೆ ನೆಗೆಟಿವ್ ಕಮೆಂಟ್ ಗಳಂತೂ ಇಲ್ವೇ ಇಲ್ಲ.,. ಇದ್ರೂ ಯಾರೋ ಒಂದಿಬ್ರೂ ಸುಖಾಸುಮ್ಮನೇ ಸಿನಿಮಾ ವಿರುದ್ಧ ಮಾತನಾಡಿರುತ್ತಾರೆ..
ಅಲ್ಲು ಅರ್ಜುನ್ ಅವರು ತಮ್ಮ ಕುಟುಂಬದೊಂದಿಗೆ RRR ಚಿತ್ರ ವೀಕ್ಷಿಣೆ ಮಾಡಿ ತಮ್ಮ ಅಭಿಪ್ರಾಯ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
RRR ನ ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಎಂತಹ ಅದ್ಭುತ ಚಿತ್ರ. ನಮ್ಮ ಹೆಮ್ಮೆಯ ನಿರ್ದೇಶಕರಾದ ಎಸ್.ಎಸ್. ರಾಜಮೌಳಿಯವರ ಅದ್ಭುತ ಕಲ್ಪನೆಗೆ ನನ್ನ ಸಲಾಂ. ವೃತ್ತಿಜೀವನದ ಅತ್ಯುತ್ತಮ ಅಭಿನಯಕ್ಕಾಗಿ ನನ್ನ ಸಹೋದರನಾದ ಮೆಗಾ ಪವರ್ ರಾಮಚರಣ ಬಗ್ಗೆ ತುಂಬಾ ಹೆಮ್ಮೆ ಎನಿಸುತ್ತದೆ.
ಅದ್ಭುತ ಪ್ರದರ್ಶನಕ್ಕಾಗಿ ಗೆಳೆಯ ಡೈನಾಮಿಕ್ ಪವರ್ ಹೌಸ್ ತಾರಕ್ ಗೆ ನನ್ನ ಪ್ರೀತಿಯ ಅಭಿನಂದನೆಗಳು. ಗೌರವಾನ್ವಿತ ಅಜಯ್ ದೇವಗನ್ ಮತ್ತು ನಮ್ಮ ಸ್ವೀಟೆಸ್ಟ್ ಹಿರೋಯಿನ್ ಆಲಿಯಾ ಭಟ್ ರವರ ಅದ್ಭುತ ಉಪಸ್ಥಿತಿ ಚಿತ್ರಕ್ಕಿದೆ.
ಎಮ್.ಎಮ್. ಕೀರವಾಣಿಯವರಿಗೆ, DOP ಸೆಂತಿಲ್ ಕುಮಾರ್ ಅವರಿಗೆ , ನಿರ್ಮಾಪಕ Dvv ದಾನಯ್ಯ ಅವರಿಗೆ, DVVMovies ನ ಎಲ್ಲರಿಗೂ ನನ್ನ ಶುಭಾಶಯಗಳು. ಭಾರತೀಯ ಸಿನಿಮಾವನ್ನು ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇದು ಬರೀ RRR ಅಲ್ಲ Kille R R R..! ಎಂದಿದ್ದಾರೆ.
ಎಲ್ಲರೂ ಚಲನಚಿತ್ರವನ್ನು ಹೊಗಳುತ್ತಿರುವ ಈ ಸಂದರ್ಭದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ಟ್ವೀಟ್ ಮೂಲಕ ಅವರ ಸೋದರಸಂಬಂಧಿ ರಾಮ್ ಚರಣ್, ರಾಜಮೌಳಿ, ಅವರ ಆಪ್ತ ಸ್ನೇಹಿತ ಎನ್ಟಿಆರ್ ಮತ್ತು ಚಲನಚಿತ್ರಕ್ಕೆ ಸಂಬಂಧಿಸಿದ ಇತರರಿಗೆ ವಿಶೇಷ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.