ಸಿಂಬು ಜೊತೆ ನೀರಜ್ ಮಾಧವ್ ಕಾಲಿವುಡ್ ವುಡ್ ಗೆ ಪಾದಾರ್ಪಣೆ
ಮಲಯಾಳಂ ನಟ ನೀರಜ್ ಮಾಧವ್ ಕಾಲಿವುಡ್ ವುಡ್ ಗೆ ಪಾದಾರ್ಪಣೆ ಮಾಡ್ತಿದ್ದಾರೆ..
ತಮ್ಮ ಚೊಚ್ಚಲ ತಮಿಳು ಸಿನಿಮಾದಲ್ಲಿ ನೀರಜ್ ಮಾಧವ್ ಅವರು ಸಿಲಂಬರಸನ್ ( Simbu ) ಜೊತೆಗೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ.. ವೆಂದು ತಾನಿಂದಾಟು ಕಾದು ಚಿತ್ರದಲ್ಲಿ ನಟಿಸಲಿದ್ದಾರೆ..
‘ವೆಂದು ತಾನಿಂದಾಟು ಕಾದು’ ಚಿತ್ರದಲ್ಲಿ ಸಿದ್ಧಿ ಇದ್ನಾನಿ ನಾಯಕಿಯಾಗಿ ನಟಿಸಿದರೆ, ಖ್ಯಾತ ನಟಿ ರಾಧಿಕಾ ಶರತ್ಕುಮಾರ್ ಸಿಂಬು ತಾಯಿಯಾಗಿ ನಟಿಸಲಿದ್ದಾರೆ.
ಲೂಸಿಯಾ ಖ್ಯಾತಿಯ ಸಿದ್ಧಾರ್ಥ್ ನುನಿ ನಿರ್ದೇಶನದ ಈ ಚಿತ್ರಕ್ಕೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.
ಸದ್ಯ ಚಿತ್ರವು ಅಂತಿಮ ಹಂತದ ಚಿತ್ರೀಕರಣದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಮುಗಿಯುವ ಸಾಧ್ಯತೆ ಇದೆ.