Pruthvi ambar
ದಿಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೆಸರು ಗಳಿಸಿದ ಪೃಥ್ವಿ ಅಂಬರ್ ಈಗ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಿದ್ಧಾರೆ..
ಆರಂಭದಲ್ಲಿ ಅಂಬರ್ ಮಂಗಳೂರಿನಲ್ಲಿ ರೇಡಿಯೋ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ಅವರು ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿ ನಟಿಸಿದರು. ಅವರನ್ನು ಆರ್ ಜೆ ನಾಗರಾಜ್ ಎಂದು ಕರೆಯುತ್ತಿದ್ದರು. ಅವರು 2014 ರಲ್ಲಿ ತುಳು ಚಲನಚಿತ್ರ ಬರ್ಕೆ ಮೂಲಕ ನಟರಾಗಿ ಎಂಟ್ರಿ ಕೊಟ್ಟಿದ್ದರು..
ಅದೇ ವರ್ಷದಲ್ಲಿ, ಕೆ ಸೂರಜ್ ಶೆಟ್ಟಿ ನಿರ್ದೇಶನದ ಸೋನಲ್ ಮೊಂಟೆರೊ ನಾಯಕಿಯಾಗಿದ್ದ ‘ಪಿಲಿಬೈಲ್ ಯಮುನಕ್ಕ’ ಚಿತ್ರದಲ್ಲಿ ನಾಯಕನಾಗಿ ನಟಿಸಿದದರುಉ.. ಇದು ತುಳು ಚಿತ್ರರಂಗದಲ್ಲಿ ಹಿಟ್ ಆಗಿತ್ತು. ನಂತರ ಹಲವಾರು ತುಳು ಮತ್ತು ಕನ್ನಡ ಚಿತ್ರಗಳಲ್ಲಿ ಅಂಬರ್ ನಟಿಸಿದ್ದಾರೆ , ನಟಿಸುತ್ತಿದ್ದಾರೆ..
ಧಾರವಾಹಿಗಳು ಮತ್ತು ಕಿರು ಚಿತ್ರಗಳು
ರಾಧಾ ಕಲ್ಯಾಣ – 2008 ರ ಸೂಪರ್ ಹಿಟ್ ಧಾರವಾಹಿ
ದ ಫ್ಲೋ – ತುಳು ಕಿರು ಚಿತ್ರ ( 2014 )
ಎಂಚಿ ಸಾವು ಮಾರ್ರೆ – ತುಳು ಕಿರು ಚಿತ್ರ ( 2014 )
ಲವ್ ಲವಿಕೆ – (2014)
ಸಾಗರ ಸಂಗಮ – (2014)
ಜೊತೆ ಜೊತೆಯಲಿ – ( ಗೆಸ್ಟ್ ಅಪಿಯರೆನ್ಸ್ )
ತುಳು ಸಿನಿಮಾಗಳು
ಬರ್ಕೆ , ಪಿಲಿಬೈಲ್ ಯಮುನಕ್ಕ, ಪಮ್ಮನ್ನೆ ದಿ ಗ್ರೇಟ್ , ಗೋಲ್ಮಾಲ್ , ಆಟಿ ಡೊಂಜಿ ದಿನ , ಇಂಗ್ಲೀಷ್ , 2020 ಕುಡ್ಕಾನ ಮದ್ಮೆ , ಎನ್ನ , 2 ಎಕ್ರೆ ವಿಕ್ಕಿ , ಟಿಬಿಎ ವಿಐಪಿಗಳ ಕೊನೆಯ ಬೆಂಚ್
ಕನ್ನಡ ಸಿನಿಮಾಗಳು
ಕರ್ವ , ರಾಜರು , ಡಿಕೆ ಬಾಸ್ , ದಿಯಾ, ಲೈಫ್ ಈಸ್ ಬ್ಯೂಟಿಫುಲ್ , ಸುಗರ್ ಲೆಸ್
ಅಲ್ಲದೇ ತಮಿಳಿನಲ್ಲಿ ಮಲೈ ಪುಡಿಕಾತಾ ಮಾಣಿತನ್ ಸಿನಿಮಾ ಮೂಲಕ ತಮಿಳು ಇಂಡಸ್ಟ್ರಿಗೆ ಪಾದಾರ್ಪಣೆ ಮಾಡ್ತಿದ್ದು , ದಿಯಾ ಹಿಂದಿ ರೀಮೇಕ್ ವರ್ಷನ್ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.. ಈ ಮೂಲಕ ಹಿಂದಿಗೂ ಪಾದಾರ್ಪಣೆ ಮಾಡ್ತಿದ್ದಾರೆ…
ದಿಯಾ ಸಿನಿಮಾದಲ್ಲಿ ಅತ್ಯದ್ಭುತ ನಟನೆಗಾಗಿ , ಬೆಸ್ಟ್ ಕನ್ನಡ ಆಕ್ಟರ್ ಸೈಮಾ ಅವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ.. ಜೊತೆಗೆ ಸಂತೋಷಮ್ ಮೋವಿ ಅವಾರ್ಡ್ಸ್ ಕನ್ನಡದಲ್ಲಿ ಲೀಡ್ ರೋಲ್ ನಲ್ಲಿ ಅತ್ಯುತ್ತಮ ನಟನ ಅವಾರ್ಡ್ ಗೆದ್ದಿದ್ದಾರೆ..