ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ ಅನನ್ಯಾ ಪಾಂಡೆ ಈಗಾಗಲೇ ಸಾಕಷ್ಟು ಸಿನಿಮಾಗಳನ್ನ ಮಾಡಿದ್ದು , ಮುಂದೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಿರಲಿದ್ದಾರೆ.. ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಟಿಸಿದ್ದಾರೆ.. ಈಗಾಗಲೇ ತಕ್ಕ ಮಟ್ಟಿಗೆ ಹೆಸರನ್ನೂ ಸಂಪಾದನೆ ಮಾಡಿದ್ದಾರೆ.. ಅಂದ್ಹಾಗೆ ಈ ವರ್ಷದ ಆರಂಭದಲ್ಲಿ ಗೆಹ್ರಾಯಿಯಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು , ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಲ್ಯಾಕ್ಮಿ ಈವೆಂಟ್ ನಲ್ಲಿ ಅನನ್ಯಾ ಪಾಂಡೆ ಸಖತ್ ಗಾರ್ಜಿಯಸ್ ಆಗಿ ಕಾಣಿಸಿಕೊಂಡಿದ್ದು , ರ್ಯಾಂಪ್ ವಾಕ್ ಮಾಡಿ ಸ್ಟೇಜ್ ಗೆ ಫೈರ್ ಹಚ್ಚಿದ್ದಾರೆ.. ಡಿಸೈನರ್ಗಳಾದ ಅನುಶ್ರೀ ರೆಡ್ಡಿ ಮತ್ತು ಅರ್ಪಿತಾ ಮೆಹ್ತಾ ಅವರೂ ಸಹ ರ್ಯಾಂಪ್ ನಲ್ಲಿ ವಾಕ್ ಮಾಡಿದ್ದಾರೆ..