ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕ್ವೀನ್ ಖ್ಯಾತಿಯ ಧ್ರುವನ್..!!
ಕೊಚ್ಚಿ : ಕ್ವೀನ್ ಸಿನಿಮಾ ಖ್ಯಾತಿಯ ಯುವ ಪ್ರಾಮಿಸಿಂಗ್ ನಟ ಧ್ರುವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..
ಯುವ ಮತ್ತು ಭರವಸೆಯ ನಟ ಧ್ರುವನ್ ಸೋಮವಾರ (ಮಾರ್ಚ್ 28) ಅಂಜಲಿ ಎಂಬುವವರ ಜೊತೆಗೆ ಮದುವೆಯ ಬಂಧನದಲ್ಲಿ ಬಂಧಿಯಾಗಿದ್ಧಾರೆ..ಆಪ್ತರು , ಸ್ನೇಹಿತರು , ಕುಟುಂಬಸ್ಥರ ಸಮ್ಮುಖದಲ್ಲಿ ಕೇರಳದ ಪಾಲಕ್ಕಾಡ್ ನಲ್ಲಿ ಮದುವೆಯಾಗಿದ್ದಾರೆ..
ಒಟ್ಟಪಾಲಂ ಮೂಲದ ಧ್ರುವನ್ ಹಲವಾರು ಸಣ್ಣ ಪಾತ್ರಗಳನ್ನು ನಿರ್ವಹಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಡಿಜೋ ಜೋಸ್ ಆಂಟೋನಿ ನಿರ್ದೇಶನದ 2018 ರಲ್ಲಿ ಬಿಡುಗಡೆಯಾದ ‘ಕ್ವೀನ್’ ಚಿತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿದರು..
ಧ್ರುವನ್ ‘ಕ್ವೀನ್’ ಚಿತ್ರದಲ್ಲಿ ಬಾಲು ಎಂಬ ಕಾಲೇಜು ವಿದ್ಯಾರ್ಥಿ ಪಾತ್ರವನ್ನು ನಿರ್ವಹಿಸಿದ್ದು , ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದರು. ಚಿತ್ರದಲ್ಲಿ ಸಾನಿಯಾ ಐಯಪ್ಪನ್, ಎಲ್ಡೋ ಮ್ಯಾಥ್ಯೂ ಮತ್ತು ಅಶ್ವಿನ್ ಜೋಸ್ ಕೂಡ ಕಾಣಿಸಿಕೊಂಡಿದ್ದರು.
ನಂತರ, ಧ್ರುವನ್ ‘ಚಿಲ್ಡ್ರನ್ಸ್ ಪಾರ್ಕ್’, ‘ಫೈನಲ್ಸ್’ ಚಿತ್ರಗಳಲ್ಲಿ ಹಲವಾರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಮೋಹನ್ ಲಾಲ್ ಅಭಿನಯದ ‘ಆರಾಟ್ಟು’ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದರು.
ಧ್ರುವನ್ ಅವರು ಅಜಿತ್ ಕುಮಾರ್ ಅಭಿನಯದ ‘ವಲಿಮೈ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು..
ಧ್ರುವನ್ ಮುಂಬರುವ ಚಿತ್ರಗಳು : ಖಜುರಾಹೋ ಡ್ರೀಮ್ಸ್ , ನ್ಯಾನ್ಸಿ ರಾಣಿ…