RRR : ಹಿಂದಿ ಬಾಕ್ಸ್ ಆಫೀಸ್ ನಲ್ಲಿ ‘RRR’ ಅಬ್ಬರ 100 ಕೋಟಿ ಕಲೆಕ್ಷನ್..!!!
RRR ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ.. ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ಬಾಹಹುಬಲಿ 2 ರೆಕಾರ್ಡ್ ಮುರಿದಿದೆ.. ಈ ಸಿನಿಮಾಗೆ ನೆಗೆಟಿವ್ ಕಮೆಂಟ್ ಗಳಂತೂ ಇಲ್ವೇ ಇಲ್ಲ.,. ಇದ್ರೂ ಯಾರೋ ಒಂದಿಬ್ರೂ ಸುಖಾಸುಮ್ಮನೇ ಸಿನಿಮಾ ವಿರುದ್ಧ ಮಾತನಾಡಿರುತ್ತಾರೆ..
ಮೊದಲ ದಿನವೇ ಸಿನಿಮಾ ಗ್ಲೋಬಲ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 223 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು.. ಇದೀಗ ಕೇವಲ ಮೂರೇ ಮೂರು ದಿನಕ್ಕೆ ಹತ್ತಿರ ಹತ್ತಿರ 500 ಕೋಟಿ ರೂಪಾಯಿ ಗಳಿಸಿದೆ..
ಮೂರೇ ದಿನದಲ್ಲಿ RRR ಸಿನಿಮಾ 500 ಕೋಟಿ ಕ್ಲಬ್ ಸೇರಿದೆ. ಬಾಲಿವುಡ್ ಮುಂದೆ ಅಬ್ಬರಿಸಿ ಬೊಬ್ಬಿರಿದಿದೆ. ಹೊಸ ಇತಿಹಾಸ ಸೃಷ್ಟಿ ಮಾಡಿ ಮತ್ತೊಮ್ಮೆ ಸೌತ್ ಪವರ್ ತೋರಿಸಿದೆ.. ಬಾಲಿವುಡ್ ನ ಯಾವ ಸಿನಿಮಾಗಳು ಈ ಮಟ್ಟಿಗೆ ಅಬ್ಬರಿಸಿಲ್ಲ..
ಇತ್ತ ಹಿಂದಿಯಲ್ಲಿ ಕೇವಲ 4 ದಿನಕ್ಕೆ 100 ಕೋಟಿ ಬಾಕ್ಸ್ ಆಫೀಸ್ ನಲ್ಲಿ RRR ಗಳಿಸಿದೆ.. ಅತೀ ಕಡಿಮೆ ಅವಧಿಯಲ್ಲಿ ನೂರು ಕೋಟಿ ಕ್ಲಬ್ ಸೇರಿದ ದಕ್ಷಿಣದ ಮೊದಲ ಸಿನಿಮಾ ಇದಾಗಿದೆ. ಮೊದಲ ದಿನ 19 ಕೋಟಿ, ಎರಡನೇ ದಿನ 24 ಕೋಟಿ, ಮೂರನೇ ದಿನ 31.5 ಕೋಟಿ ಮತ್ತು ನಾಲ್ಕನೇ ದಿನಕ್ಕೆ 17 ಕೋಟಿ ರೂಪಾಯಿಗಳ ಕೆಲಕ್ಷನ್ ಆಗಿದ್ದು, ಮಂಗಳವಾರ ನೂರು ಕೋಟಿಗೂ ಅಧಿಕ ಹಣ ಆರ್.ಆರ್.ಆರ್ ನಿರ್ಮಾಪಕರ ಜೇಬಿಗೆ ಬೀಳಲಿದೆ.
ಈ ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ 14.5 ಕೋಟಿ ಗಳಿಕೆ ಮಾಡಿದ್ದರೆ, ಆಂಧ್ರ ಪ್ರದೇಶದಲ್ಲಿ 75 ಕೋಟಿ ಗಳಿಸಿತ್ತು. ತಮಿಳು ನಾಡಿನಲ್ಲಿ 10 ಕೋಟಿ, ಕೇರಳದಲ್ಲಿ 4 ಕೋಟಿ, ಹಿಂದಿಯಲ್ಲಿ 14 ಕೋಟಿ ಸಂಪಾದನೆ ಮಾಡಿತ್ತು.. ಮೊದಲ ದಿನ ಒಟ್ಟಾರೆಯಾಗಿ ವಿಶ್ವಾದ್ಯಂತ 223 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಹುಬಲಿ ರೆಕಾರ್ಡ್ ಮುರಿದಿರುವುದು ವಿಶೇಷ..