ಬಾಲಿವುಡ್ ಯಾಕೆ ಉತ್ತಮ ಪ್ರದರ್ಶನ ಕಾಣುತ್ತಿಲ್ಲವೋ ಗೊತ್ತಿಲ್ಲ : ಸಲ್ಮಾನ್ ಖಾನ್
ಸಲ್ಮಾನ್ ಖಾನ್ : ನಮ್ಮ ಚಿತ್ರಗಳು ದಕ್ಷಿಣದಲ್ಲಿ ಏಕೆ ಉತ್ತಮವಾಗಿ ಪ್ರದರ್ಶನ ಕಾಣ್ತಿಲ್ಲ , ದಕ್ಷಿಣ ಚಿತ್ರಗಳು ಇಲ್ಲಿ ಅಷ್ಟು ಉತ್ತಮವಾಗಿ ಪ್ರದರ್ಶನ ಕಾಣ್ತಿದೆ ಎಂಬುದು ನನಗೆ ಆಶ್ಚರ್ಯ ಮೂಡಿಸಿದೆ ಎಂದು ಸಲ್ಮಾನ್ ಖಾನ್ ಅವರು ಹೇಳಿಕೊಂಡಿದ್ದಾರೆ..
ಬಾಲಿವುಡ್ ನಟ ಸಲ್ಮಾನ್ ಖಾನ್ ದಕ್ಷಿಣ ಭಾರತದ ಚಲನಚಿತ್ರಗಳು, “ಹೀರೋಯಿಸಂ ಚಿತ್ರಗಳು” ಎಂದಿದ್ದಾರೆ.. ಇದೇ ವೇಳೆ ಟೈಗರ್ 3 ಬಗ್ಗೆ ಪ್ರಮುಖಾಂಶಗಳ ಬಗ್ಗೆ ಮಾತನಾಡುತ್ತಾರೆ.
ಇದೇ ವೇಳೆ ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ ಮುಂಬರುವ ಚಿತ್ರದ ಬಗ್ಗೆ ಮಾತನಾಡಿದರು. ಈ ಚಿತ್ರದಲ್ಲಿ ಸಲ್ಲು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿ ಚಿತ್ರಗಳಿಗೆ ‘ಹೀರೋಯಿಸಂ’ ಇರಬೇಕಾದ ಅಗತ್ಯದ ಬಗ್ಗೆಯೂ ಮಾತನಾಡಿದ್ದಾರೆ.
ಚಿರಂಜೀವಿ ಅವರ ಮುಂದಿನ ಚಿತ್ರವಾದ ಗಾಡ್ ಫಾದರ್ನಲ್ಲಿ ವಿಶೇಷ ಪಾತ್ರವನ್ನು ಮಾಡುತ್ತಿದ್ದಾರೆ ಭಾಯ್ ಜಾನ್.. ಅಲ್ಲದೇ ಚಿರಂಜೀವಿ ಅವರ ಜೊತೆಗೆ ಕೆಲಸ ಮಾಡಿದ್ದು ಅದ್ಭುತ ಅನುಭವ ಎಂದು ಅವರು ಹೇಳಿದರು. ನನಗೆ ಚಿರು ಗಾರು ಬಹಳ ಸಮಯದಿಂದ ಗೊತ್ತು. ಸ್ನೇಹಿತರೂ ಆಗಿದ್ದಾರೆ.
ಅವರ ಮಗ (ರಾಮ್ ಚರಣ್) ಕೂಡ ಸ್ನೇಹಿತ. ಅವರು RRR ನಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ಅವರ ಚಿತ್ರದ ಯಶಸ್ಸಿಗೆ ನಾನು ಅವರಿಗೆ ಶುಭ ಹಾರೈಸಿದ್ದೀನಿ. ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದಿದ್ಧಾರೆ..