ಸರೋಜಿನಿ ನಾಯ್ಡು ಜೀವನಚರಿತ್ರೆ ಆಧಾರಿತ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳಲಿದ್ದಾರೆ ವಿನಯ್ ಚಂದ್ರ
‘ಭಾರತದ ಕೋಗಿಲೆ’ ಸರೋಜಿನಿ ನಾಯ್ಡು ಅವರ ಜೀವನಚರಿತ್ರೆ ಆಧಾರಿತ ಚಿತ್ರಕ್ಕೆ ಆಕ್ಷಟ್ ಹೇಳಲು ಸಜ್ಜಾಗಿರುವ ವಿನಯ್ ಚಂದ್ರ ಅವರು ನಿರ್ದೇಶಕರಾಗಿಯೂ ಈ ಸಿನಿಮಾ ಮೂಲಕ ಬಡ್ತಿ ಪಡೆಯಲಿದ್ದಾರೆ.. ಅಂದ್ಹಾಗೆ ವಿನಯ್ ಚಂದ್ರ ಅವರು ಗುರು, ಮಂಜುನಾಥ ಬಿಎ, ಎಲ್ಎಲ್ ಬಿ ಮತ್ತು ಬಾಡಿಗಾರ್ಡ್ ನಂತಹ ಕನ್ನಡ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದು , ನಿರ್ದೇಶಕರಾಗಿ ಇದು ಚೊಚ್ಚಲ ಸಿನಿಮಾವಾಗಿದೆ.
ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡ ವಿನಯ್ ಚಂದ್ರ ಅವರು, ಈ ಬಯೋಪಿಕ್ ನೈಟಿಂಗೇಲ್ ಆಫ್ ಇಂಡಿಯಾದ ಬಗ್ಗೆ ಗೊತ್ತಿರದ ಕಥೆಯನ್ನು ಹೇಳುತ್ತದೆ ಮತ್ತು ಚಿತ್ರ ಸರೋಜಿನಿ ನಾಯ್ಡು ಅವರ ಹಲವು ವೈಯಕ್ತಿಕ ವಿಚಾರಗಳನ್ನು ತಿಳಿಸುತ್ತದೆ ಎಂದಿದ್ದಾರೆ. ನೈಟಿಂಗೇಲ್ ಆಫ್ ಇಂಡಿಯಾ ಸರೋಜಿನಿ ನಾಯ್ಡು ಅವರ ಬಗ್ಗೆ ವ್ಯಾಪಕವಾದ ಸಂಶೋಧನೆಯ ನಂತರ ಅಂತಿಮವಾಗಿ ಈ ವಿಷಯವನ್ನು ಸಿನಿಮಾಗೆ ಆಯ್ಕೆ ಮಾಡಿದ್ದೇವೆ ಎಂದು ವಿನಯ್ ಚಂದ್ರ ಹೇಳಿದ್ದಾರೆ.
ವಿಸಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ದಕ್ಷಿಣ ಭಾರತದ ಖ್ಯಾತ ನಟಿ ಶಾಂತಿಪ್ರಿಯಾ ಅವರು ಸರೋಜಿನಿ ನಾಯ್ಡು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಿತನ್ ತೇಜವಾಣಿ ಅವರು ಸರೋಜಿನಿ ನಾಯ್ಡು ಅವರ ಪತಿ ಮುತ್ಯಾಲ ಗೋವಿಂದರಾಜುಲು ನಾಯ್ಡು ಪಾತ್ರದಲ್ಲಿ ಮತ್ತು ಜರೀನಾ ವಹಾಬ್ ಅವರು ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.. ಗಾಂಧಿ ಜೀವನಾಧಾರಿತ ಚಿತ್ರವೇ ಈ ಸಿನಿಮಾ ಮಾಡಲು ನನಗೆ ಪ್ರೇರೇಪಿಸಿತು ಎಂದು ವಿನಯ್ ಚಂದ್ರ ಅವರು ಹೇಳಿದ್ದಾರೆ. ಅನಿಲ್ ಕುಮಾರ್ ಕೆ ಛಾಯಾಗ್ರಹಣ ಚಿತ್ರಕ್ಕಿದ್ದು , ವಿನಯ್ ಚಂದ್ರ ಅವರದ್ದೇ ಸಂಗೀತವಿರಲಿದೆ..