ವಾರಣಾಸಿಯಲ್ಲಿ ಕಾಣಿಸಿಕೊಂಡ ಬಾಲಿವುಡ್ ಲವ್ ಬರ್ಡ್ಸ್..!!
ಆಲಿಯಾ ಭಟ್ ಸದ್ಯ ಗಂಗೂಬಾಯಿ ಕಾಠಿಯಾವಾಡಿ , RRR ಸಸಿನಿಮಾಗಳ ಸಕ್ಸಸ್ ನ ಖುಷಿಯಲ್ಲಿದ್ದಾರೆ.. ಇಷ್ಟು ದಿನ ಅವರ ರಿಯಲ್ ಲೈಫ್ ನಲ್ಲಿ ಪಾರ್ಟ್ ನರ್ ಆಗಲು ಹೊರಟಿರುವ ಬ್ರಹ್ಮಾಸ್ತ್ರ ಸಿನಿಮಾದ ಶೂಟಿಂಗ್ ನಲ್ಲಿ ವಾರಣಾಸಿಯಲ್ಲಿ ಬ್ಯುಸಿಯಿದ್ದರು.. ಇತ್ತೀಚೆಗೆ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ.. ಅಂದ್ಹಾಗೆ ಏಪ್ರಿಲ್ ನಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡ್ತಿದೆ.. ವಾರಣಾಸಿಯಲ್ಲಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಕಾಣಿಸಿಕೊಂಡಿದ್ದು , ಅವರ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ..
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಹಳ ದಿನಗಳಿಂದ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗೆ, ರಣಬೀರ್ ಮತ್ತು ಆಲಿಯಾ ಕಾಶಿ ವಿಶ್ವನಾಥನ ಸನ್ನಿಧಿಗೆ ಬೇಟಿ ನೀಡಿದ್ದಾರೆ, ವಾರಣಾಸಿಯ ಬೀದಿ ಬೀದಿಗಳಲ್ಲಿ ಶೂಟಿಂಗ್ ನಡೆಸಿದ್ದಾರೆ. ಚಿತ್ರದ ನಿರ್ಮಾಪಕ ಕರಣ್ ಜೋಹಾರ್, ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಮುಗಿದಿದೆ ಎಂದು ಹೇಳಿ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.
ಅದ್ಭುತ, ರೋಮಾಂಚಕಾರಿ, ಕಠಿಣ ಪರಿಶ್ರಮ, ಸಮರ್ಪಣೆ, ಪ್ರೀತಿ ಮತ್ತು ಉತ್ಸಾಹದಿಂದ ತುಂಬಿದ ಪ್ರಯಾಣವು ಅಂತಿಮವಾಗಿ ಕೊನೆಗೊಂಡಿದೆ. #ಬ್ರಹ್ಮಾಸ್ತ್ರ – 1 ನಿಮಗಾಗಿ ತರುತ್ತಿದ್ದೇವೆ. ಸೆಪ್ಟೆಂಬರ್ 9 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕರಣ್ ಬರೆದುಕೊಂಡಿದ್ದಾರೆ.
ಬ್ರಹ್ಮಾಸ್ತ್ರ ಚಿತ್ರೀಕರಣ ಮುಕ್ತಾಯದ ಬಗ್ಗೆ ಮಾಹಿತಿ ನೀಡಿದ ಆಲಿಯಾ ಭಟ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲವು ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ನಾವು 2018 ರಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದೆವು ಈಗ … ಬ್ರಹ್ಮಾಸ್ತ್ರ ಭಾಗ 1 ರ ಚಿತ್ರೀಕರಣ ಮುಗಿದಿದೆ . 09.09.2022.ರಂದು ಚಿತ್ರಮಂದಿರಗಳಲ್ಲಿ ನಿಮ್ಮನ್ನು ನೋಡೋಣ ಎಂದು ಆಲಿಯಾ ಬರೆದುಕೊಂಡಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಒಟ್ಟಿಗೆ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ರಣಬೀರ್ ಮತ್ತು ಆಲಿಯಾ ಹೊರತಾಗಿ ಅಮಿತಾಬ್ ಬಚ್ಚನ್, ಮೌನಿ ರೈ, ನಾಗಾರ್ಜುನ ಅಕ್ಕಿನೇನಿ ಸೇರಿದಂತೆ ಘಟಾನುಘಟಿ ಹಿರಿಯ ನಟರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಿಂದಿ, ತೆಲುಗು, ಮಲಯಾಳಂ, ಕನ್ನಡ ಮತ್ತು ತಮಿಳು ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.