“ರಾಮ್ ಚರಣ್ ಇಲ್ಲದೆ RRR ಸಾಧ್ಯವಾಗ್ತಿರಲಿಲ್ಲ” – ಜ್ಯೂ. NTR
ಮಾರ್ಚ್ 25 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ RRR ಈಗಾಗಲೇ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಹುಬಲಿ 2 ರೆಕಾರ್ಡ್ ಬ್ರೇಕ್ ಮಾಡಿದೆ..
ರಾಮ್ ಚರಣ್ ಈ ಸಿನಿಮಾದ ಚಾರ್ಮ್.. ಆದ್ರೆ ಜ್ಯೂನಿಯಯರ್ NTR ಈ ಸಿನಿಮಾದ ಸೋಲ್ ಎನ್ನಬಹುದು.. ಇಬ್ಬರ ಪಾತ್ರಗಳು ಒಬ್ಬರಿಲ್ಲದೇ ಇನ್ನೊಬ್ಬರ ಪಾತ್ರಕ್ಕೆ ಮಹತ್ವಿಬಲ್ಲ ಎಂಬಂತಿದೆ.. ಆದ್ರೆ ಎಲ್ಲೋ ಒಂದ್ ಕಡೆ NTR ಅವರಿಗಿಂತ ರಾಮ್ ಚರಣ್ ಅವರನ್ನೇ ಹೆಚ್ಚು ಹೈಲೇಟ್ ಮಾಡಲಾಗಿದೆ ಎಂದು ಅವರ ಅಭಿಮಾನಿಗಳು ಕೊಂಚ ಅಸಮಾಧಾಗೊಂಡಿರುವ ಹಾಗೆ ಕಾಣ್ತಿದೆ..
Urfi Javed : ವಿಚಿತ್ರ ಬಟ್ಟೆಯ ರೆಕಾರ್ಡ್ ಬ್ರೇಕ್ ಮಾಡಿದ ಉರ್ಫಿ
ಆದ್ರೆ.. ಇತ್ತೀಚೆಗೆ NTR ಅವರೇ ಈ ಬಗ್ಗೆ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘ ಪತ್ರವೊಂದನ್ನು ಬಿಡುಗಡೆ ಮಾಡಿದ್ದು RRR ಸಕ್ಸಸ್ ಗಾಗಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಅವರ ಈ ಮಾತುಗಳಿಂದ ಅವರ ಅಭಿಮಾನಿಗಳ ಅಸಮಾಧಾನವೂ ಕೊಂಚ ಮಟ್ಟಿಗೆ ದೂರಾಗಿದೆ ಅನ್ನಬಹುದು..
“ಅಲ್ಲೂರಿ ಸೀತಾರಾಮರಾಜು ಪಾತ್ರವನ್ನು ಚರಣ್ ಗಿಂತ ಯಾರೂ ಚೆನ್ನಾಗಿ ಮಾಡಲು ಸಾಧ್ಯವಿಲ್ಲ.
ಚೆರ್ರಿ ಇಲ್ಲದೆ ಆರ್ಆರ್ಆರ್ ಅನ್ನು ಕಲ್ಪಿಸಿಕೊಳ್ಳುವುದು ಕಷ್ಟ.. ಅಲ್ಲೂರಿ ಪಾತ್ರದೊಂದಿಗೆ ಭೀಮನ ಪಾತ್ರವೂ ಪರಿಪೂರ್ಣವಾಗಿದೆ.. ಜಕ್ಕಣ್ಣ ತಮ್ಮ ಕೆರಿಯರ್ ನ ಬೆಸ್ಟ್ ಸಿನಿಮಾ ಕೊಟ್ಟಿದ್ದಾರೆ. ತನ್ನಲ್ಲಿರುವ ಶ್ರೇಷ್ಠ ನಟನನ್ನು ಕಂಡುಹಿಡಿದ ರಾಜಮೌಳಿಗೆ ಧನ್ಯವಾದ ಎಂದಿದ್ದಾರೆ ಎನ್ ಟಿಆರ್..
RRR – without Ramcharan RRR is nothing – ju. NTR