ಪ್ರಚಾರದಲ್ಲಿ RRR ಮೀರಿಸಿದ KGF ಟೀಮ್ – KGF 2 VERSE..!! ಏನಿದು..??
KGF 2 ತಂಡ ಸಿನಿಮಾವನ್ನ ವಿಭಿನ್ನವಾಗಿ ಪ್ರಚಾರ ಮಾಡಲು ಮುಂದಾಗಿದೆ.. KGF ವರ್ಸ್… ಅಂದ್ರೆ ಹೊಸ ತಂತ್ರಜ್ಞಾನದ ಮೂಲಕ ಪ್ರೇಕ್ಷಕರನ್ನು ಸೆಳೆಯುವುದರ ಜೊತೆಗೆ ಮಾರ್ಕೆಟಿಂಗ್ ಗೆ ಸಜ್ಜಾಗಿದೆ ಸಿನಿತಂಡ..
ಅಂದ್ಹಾಗೆ ಕೆಜಿಎಫ್ ವರ್ಸ್ ಎಂದ್ರೆ ಆರ್ಟಿಫಿಷಿಯಲ್ ಆಗಿ ಸೃಷ್ಟಿ ಮಾಡಲಾದ ಲೋಕ.. ಆ ಲೋಕಕ್ಕೆ ತೆರಳಬೇಕಾದ್ರೆ ಒಂದು ಡಿವೈಸ್ ನ ಅವಶ್ಯಕತೆ ಇರುತ್ತೆ.. ಈ ಡಿವೈಸ್ ಕಣ್ಣಿಗೆ ಹಾಕಿದಾಗ ನೀವು ಸಹ ರಾಕಿ ಭಾಯ್ ಪ್ರಪಂಚಕ್ಕೆ ಎಂಟ್ರಿ ಪಡೆಯಬಹುದು.. ಅಂದ್ಹಾಗೆ ಇದೊಂದು ಮಾರ್ಕೆಟಿಂಗ್ ಸ್ಟ್ರಾಟಜಿ ಕೂಡ.. ಅಂದ್ಹಾಗೆ ಅದ್ಹೇಗೆ ನೀವು ರಾಕಿ ಭಾಯ್ ಪ್ರಪಂಚಕ್ಕೆ ಪ್ರವೇಶ ಮಾಡಬಹುದು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ..
‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಏಪ್ರಿಲ್ 14ರಂದು ರಿಲೀಸ್ ಆಗಲಿದೆ. ಅದಕ್ಕೂ ಒಂದು ವಾರ ಮುನ್ನ ‘ಕೆಜಿಎಫ್ ವರ್ಸ್’ ಸೇಲ್ ಆರಂಭ ಆಗಲಿದೆ. ಡಿಜಿಟಲ್ ಪ್ರಪಂಚದಲ್ಲಿ ಸದ್ಯ ಭಾರಿ ಚಾಲ್ತಿಯಲ್ಲಿರುವ ಅವತಾರ್ ಎನ್ಎಫ್ಟಿ ಯನ್ನು ಹಾಗೂ ಡಿಜಿಟಲ್ ಆರ್ಟ್ ಅನ್ನು ಬಳಸಲಾಗಿದೆ. ಅವತಾರ್ ಎನ್ಎಫ್ಟಿ ಅನ್ನೋದು ಡಿಜಿಟಲ್ ಪ್ರೊಪೈಲ್ ಪಿಕ್ಚರ್ ರೀತಿ. ಇಲ್ಲಿರುವ ಒಂದೊಂದೂ ಕ್ಯಾರೆಕ್ಟರ್ಗಳೂ ಡಿಫ್ರೆಂಟ್ ಆಗಿ ಇರುತ್ತವೆ. ಕ್ಯಾರೆಕ್ಟರ್ಗಳೂ ಧರಿಸುವ ಬಟ್ಟೆ, ಬಣ್ಣ, ಮುಖಭಾವ ಎಲ್ಲವೂ ವಿಭಿನ್ನವಾಗಿರುತ್ತೆ.
ಸೋಶಿಯಲ್ ಮೀಡಿಯಾದಲ್ಲೂ ಈ ಎನ್ಎಫ್ಟಿ ಭಾರೀ ಫೇಮಸ್ ಆಗುತ್ತಿದೆ. ಹೀಗಾಗಿ ಈ ಹೊಸ ಪ್ರಪಂಚಕ್ಕೆ ಲಗ್ಗೆಇಟ್ಟಿರುವ ಕೆಜಿಎಫ್ ತಂಡ ಅಭಿಮಾನಿಗಳಿಗೆ ಯಾವ ರೀತಿ ಹೊಸ ಅನುಭವ ನೀಡುತ್ತೆ ಎನ್ನುವುದನ್ನ ಕಾದು ನೋಡ್ಬೇಕಿದೆ.. ಅಂದ್ಹಾಗೆ ರಾಕಿ ಭಾಯ್ ಪ್ರಪಂಚದೊಳಗೆ ಗೇಮ್ಸ್, ಇವೆಂಟ್ಸ್ ಹಾಗೂ ಅವತಾರ್ ಎನ್ಎಫ್ಟಿ ಗಳಿರಲಿವೆ.. ಕೆಜಿಎಫ್ ವರ್ಸ್ ಇದೇ ಏಪ್ರಿಲ್ 07ರಂದು ಸೇಲ್ ಆರಂಭ ಆಗಲಿದೆ.
RRR : ರಾಮ್ ಚರಣ್ ಜೊತೆ ಆ ಒಂದು ಸೀನ್ ಶೂಟಿಂಗ್ ವೇಳೆ ಭಯವಾಗಿತ್ತು : ರಾಜಮೌಳಿ